×
Ad

ಮಣಿಪಾಲ ಲಾಡ್ಜ್‌ನಲ್ಲಿ ಡ್ರಗ್ಸ್ ಸೇವನೆ: ಮೂವರು ಆರೋಪಿಗಳ ಬಂಧನ

Update: 2025-04-23 13:15 IST

ಮಣಿಪಾಲ, ಎ.23: 80 ಬಡಗಬೆಟ್ಟು ಗ್ರಾಮದ ದಶರಥ ನಗರದ ಲಾಡ್ಜ್‌ವೊಂದರಲ್ಲಿ ಮಾದಕ ವಸ್ತುವನ್ನು ಹೊಂದಿದ್ದ ಮೂವರು ಆರೋಪಿ ಗಳನ್ನು ಮಣಿಪಾಲ ಪೊಲೀಸರು ಎ.22ರಂದು ಮಧ್ಯಾಹ್ನ ಬಂಧಿಸಿದ್ದಾರೆ.

ಕಾಪುವಿನ ಮುಹಮ್ಮದ್ ಅಝರುದ್ದೀನ್, ಮಹಾರಾಷ್ಟ ರಾಜ್ಯದ ಪುಣೆಯ ರಾಜೇಶ್ ಪ್ರಕಾಶ್ ಜಾದವ್, ಮಲ್ಪೆಯ ನಾಝಿಲ್ ಯಾನೆ ಆಸೀಫ್ ಬಂಧಿತ ಆರೋಪಿಗಳು. ಖಚಿತ ಮಾಹಿತಿ ತಿಳಿದ ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಡೌನ್ ಟೌನ್ ಲಾಡ್ಜ್‌ನ ರೂಮಿಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರಿಂದ 40,000ರೂ. ಮೌಲ್ಯದ ಒಟ್ಟು 13.70 ಗ್ರಾಂ ತೂಕದ ಎಂಡಿಎಂಎ ಡ್ರಗ್ಸ್ ಮತ್ತು 10,500ರೂ. ಮೌಲ್ಯದ 225 ಗ್ರಾಂ ಗಾಂಜಾ, 15 ಪ್ಲಾಸ್ಟಿಕ್ ಕವರ್, 5 ಸಿರಿಂಜ್‌ಗಳು, ಸ್ಟಿರಾಯಲ್ ವಾಟರ್ ನ 5ml ನ 3 ಪ್ಲಾಸ್ಟಿಕ್ ಸೀಸೆ ಹಾಗೂ 5500ರೂ. ಮೌಲ್ಯದ ಎರಡು ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News