ಮೊಬೈಲ್ ಹ್ಯಾಕ್: ಆನ್‌ಲೈನ್ ವಂಚನೆ; ಪ್ರಕರಣ ದಾಖಲು
Update: 2026-01-13 22:28 IST
ಉಡುಪಿ, ಜ.13: ಮೊಬೈಲ್ ಹ್ಯಾಕ್ ಮಾಡಿ ಫ್ಲಿಫ್‌ಕಾರ್ಟ್ ಮೂಲಕ ಮೊಬೈಲ್ ಖರೀದಿಸಿ ಸಾವಿರಾರು ರೂ. ಆನ್‌ಲೈನ್ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತರು ಅ.16ರಂದು ಜಡ್ಕಲ್ ಸಮೀಪದ ಹಾಲ್ಕಲ್‌ನ ಜೆಸ್ಟಿನ್ ಜೋಸೆಫ್(29) ಎಂಬವರಿಗೆ ತಿಳಿಯದಂತೆ ಅವರ ಮೊಬೈಲ್ ಹ್ಯಾಕ್ ಮಾಡಿ ಅವರ ಪ್ಲಿಪ್‌ಕಾರ್ಟ್ ಅಕೌಂಟ್‌ನಿಂದ 2 ಮೊಬೈಲ್‌ಗಳನ್ನು ಖರೀದಿ ಮಾಡಿದ್ದು, ಜೆಸ್ಟಿನ್ ಅವರ ಬ್ಯಾಂಕ್ ಖಾತೆಯಿಂದ ಆ್ಯಪ್ ಬಳಸಿಕೊಂಡು 40,156ರೂ. ಲೋನ್ ಮಾಡಿ ಪ್ರತಿ ತಿಂಗಳು 13,000ರೂ.ಗಳಂತೆ 3 ತಿಂಗಳ ಇಎಂಐಗೆ ಕನ್ವರ್ಟ್ ಮಾಡಿದ್ದಾರೆ. ಈ ಮೂಲಕ ಖರೀದಿಸಿದ ಮೊಬೈಲ್‌ಗಳು ಪಶ್ಚಿಮ ಬಂಗಾಳದ ವಿಳಾಸಕ್ಕೆ ಡೆಲಿವರಿ ಆಗಿದೆ ಎಂದು ದೂರಲಾಗಿದೆ.