ಉಡುಪಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷರಾಗಿ ಮುನೀರ್ ಆಯ್ಕೆ
Update: 2026-01-14 19:09 IST
ಉಡುಪಿ, ಜ.14: ಉಡುಪಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ 43ನೆ ಮಹಾಸಭೆಯು ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ ಮುಂದಿನ ಎರಡು ವರ್ಷದ ಅವಧಿಗೆ ಹೊಸ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಮುನೀರ್ ಮೊಹಮ್ಮದ್, ಉಪಾಧ್ಯಕ್ಷರಾಗಿ ರಿಯಾಝ್ ಅಹಮದ್ ಕುಕ್ಕಿಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ವಿ.ಎಸ್.ಉಮರ್, ಖಜಾಂಜಿಯಾಗಿ ಇಕ್ವಾನ್ ರವೂಫ್ ಆಯ್ಕೆಯಾದರು.
ಇತರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರಿಯಾಝ್ ಅಹಮದ್ ಉಡುಪಿ, ಗಫೂರ್ ಆದಿಉಡುಪಿ, ಖಾಲಿದ್ ಅಬ್ದುಲ್ ಅಝೀಝ್, ಹನೀಫ್ ಕುಂಜಿಬೆಟ್ಟು, ಶಮೀಮ್ ಶಾಂತಿನಗರ, ಪರ್ವೇಜ್ ಶೈಖ್, ಸುಲೈಮಾನ್ ಶೈಖ್, ಇಕ್ಬಾಲ್ ಮನ್ನಾ, ಸಲೀಂ ಬೈಲೂರು ಅವರನ್ನು ಆಯ್ಕೆ ಮಾಡಲಾಯಿತು.