ಜ.17ರಂದು ಉಡುಪಿ ಜಿಲ್ಲಾಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆ
ಸಾಂದರ್ಭಿಕ ಚಿತ್ರ
ಉಡುಪಿ, ಜ.14: ಉದ್ಯಮಿ ಪ್ರಸಾದ್‌ರಾಜ್ ಕಾಂಚನ್‌ಕಂಚನ್ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ವತಿಯಿಂದ ಶಿರೂರು ಪರ್ಯಾಯ ಮಹೋತ್ಸವದ ಪ್ರಯುಕ್ತ ‘ಪರ್ಯಾಯ ಮಿಸ್ಟರ್ ಉಡುಪಿ 2026-ಕ್ಲಾಸಿಕ್’ ಉಡುಪಿ ಜಿಲ್ಲಾ ಮಟ್ಟದ ಬಾಡಿಬಿಲ್ಡಿಂಗ್ ಸ್ಪರ್ಧೆಯನ್ನು ಉಡುಪಿ ಶೋಕಾ ಮಾತಾ ಇಗರ್ಜಿ ಚರ್ಚ್ ಆವರಣದಲ್ಲಿ ಜ.17ರಂದು ಆಯೋಜಿಸಲಾಗಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಜೇಸನ್ ಡಯಾಸ್, ಸಂಜೆ 6ಗಂಟೆಗೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಲಿರುವರು. ಸ್ಪರ್ಧೆಗಳು ಸಂಜೆ 7ಗಂಟೆಯಿಂದ ಆರಂಭವಾಗಲಿದೆ ಎಂದರು.
ಉಡುಪಿ ಜಿಲ್ಲೆಯಿಂದ 150ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಸ್ಪರ್ಧೆಗೆ ಐಬಿಬಿಎಫ್‌ನಿಂದ ಆಯ್ಕೆಯಾದ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದ ತೀರ್ಪುಗಾರರು ಆಗಮಿಸಲಿ ದ್ದಾರೆ. ಸ್ಪರ್ಧೆಯು ಒಟ್ಟು 5,85,000ರೂ. ನಗದು ಬಹುಮಾನಗಳೊಂದಿಗೆ 55, 60, 65, 70, 75, 80, 80+ಕೆಜಿ ಸಹಿತ ಒಟ್ಟು 7 ವಿಭಾಗಗಳಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಮಿಥಿಲೇಶ್, ಅಸೋಸಿಯೇಶನ್ ಕಾರ್ಯದರ್ಶಿ ವಿಶ್ವನಾಥ ಕಾಮತ್, ಖಜಾಂಚಿ ಮಾರುತಿ ಜಿ.ಬಂಗೇರಾ, ಜಾನ್ಸನ್ ಅರುಣ್ ಡಿಸೋಜ ಉಪಸ್ಥಿತರಿದ್ದರು.