ಬಾವಿಗೆ ಬಿದ್ದು ಮಹಿಳೆ ಮೃತ್ಯು
Update: 2026-01-13 22:38 IST
ಬೈಂದೂರು, ಜ.13: ಮಹಿಳೆಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಜ.12ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಬೈಂದೂರಿನ ಹರೀಶ್ ಚಂದನ್ ಎಂಬವರ ಪತ್ನಿ ನಾಗರತ್ನ(48) ಎಂದು ಗುರುತಿಸಲಾಗಿದೆ. ಇವರು ದೇವಸ್ಥಾನಕ್ಕೆ ಹೋಗಿ ಮನೆಗೆ ಮರಳಿ ಬಂದಿದ್ದು, ಬಳಿಕ ಮನೆಯಿಂದ ಹೊರಗಡೆ ಹೋದವರು ನಾಪತ್ತೆಯಾದರು. ಹುಡುಕಾಡಿದಾಗ ನೆರೆಮನೆಯ ಬಾವಿಯ ನೀರಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.