ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿ| ನೂತನ ಅಧ್ಯಕ್ಷರಾಗಿ ಡಾ. ರಿಝ್ವಾನ್ ಕಾರ್ಕಳ ಆಯ್ಕೆ
Update: 2026-01-13 21:49 IST
ಡಾ.ರಿಝ್ವಾನ್
ಉಡುಪಿ, ಜ.13: ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಮಿತಿ ಅಧ್ಯಕ್ಷ ಮುಹಮ್ಮದ್ ಸಲೀಂ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನೂತನ ಸಾಲಿನ ಅಧ್ಯಕ್ಷರಾಗಿ ಡಾ.ರಿಝ್ವಾನ್ ಕಾರ್ಕಳ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಹುಸೈನ್ ಹೈಕಾಡಿ, ಸಲೀಂ ಬಾಜಿ, ಪ್ರಧಾನ ಕಾರ್ಯದರ್ಶಿಯಾಗಿ ಮೌಲಾನಾ ಝಮೀರ್ ಅಹಮದ್ ರಶಾದಿ, ಜೊತೆ ಕಾರ್ಯದರ್ಶಿಯಾಗಿ ಶೇಖ್ ಇಸಾಕ್ ಅಡ್ವೊಕೇಟ್, ಕೋಶಾಧಿಕಾರಿಯಾಗಿ ಫೀರ್ ಸಾಹೇಬ್ ಉಡುಪಿ, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ಸಮಿ ಬೈಂದೂರು ಆಯ್ಕೆಯಾದರು.