×
Ad

ಮಣಿಪಾಲ: ಪ್ರವಾಸಿಗರ ತೆಪ್ಪ ಕಳವು

Update: 2023-09-30 12:25 IST

ಮಣಿಪಾಲ, ಸೆ.30: ಶೀಂಬ್ರ-ಪರಾರಿ ಸೇತುವೆ ಕೆಳಗಡೆ ಡಿವೈನ್ ಪ್ಯಾಡಲ್ ಸಂಸ್ಥೆಗೆ ಸೇರಿದ ಪ್ರವಾಸಿಗರನ್ನು ಕೊಂಡೊಯ್ಯುವ  ತೆಪ್ಪ (ದೋಣಿ) ಸೆ.26ರಂದು ಕಳವಾಗಿರುವ ಬಗ್ಗೆ ವರದಿಯಾಗಿದೆ.

ಮಣಿಪಾಲದ ಸುತ್ತಮುತ್ತ ಪೂಜಿಸಿದ ಸುಮಾರು 6 ಗಣೇಶ ವಿಗ್ರಹಗಳನ್ನು ಈ ತೆಪ್ಪದಲ್ಲಿಯೇ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡಲಾಗಿದೆ. ಈ ಕಾರ್ಯಕ್ರಮ ಮುಗಿದ ನಂತರ ದಡದಲ್ಲಿ ಇರಿಸಿದ್ದ ತೆಪ್ಪವನ್ನು ಕಳವು ಮಾಡಲಾಗಿದೆ ಎಂದು ಸಂಸ್ಥೆಯ ಮಾಲಕರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News