×
Ad

ಉಡುಪಿ ಕ್ರೈಸ್ತ ಧರ್ಮಪ್ರಾಂತ ಮಟ್ಟದ ತ್ರೋಬಾಲ್, ಕ್ರಿಕೆಟ್ ಪಂದ್ಯಾಟ: ಕೊಳಲಗಿರಿ, ಉಡುಪಿ ಚರ್ಚ್ ಚಾಂಪಿಯನ್

Update: 2023-10-02 15:23 IST

ಕಾಪು, ಅ.2: ಕಟಪಾಡಿ ಸಂತ ವಿನ್ಸೆಂಟ್ ಡಿ ಪಾವ್ಲ್ ಚರ್ಚಿನ ಅಮೃತ ಮಹೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಉಡುಪಿ ಧರ್ಮಪ್ರಾಂತ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಉಡುಪಿ ಶೋಕಮಾತ ಚರ್ಚ್ ಹಾಗೂ ಕ್ರಿಕೆಟ್ ನಲ್ಲಿ ಕೊಳಲಗಿರಿ ಸೇಕ್ರೆಡ್ ಹಾರ್ಟ್ ಚರ್ಚ್ ಚಾಂಪಿಯನ್ ಆಗಿ ಮೂಡಿ ಬಂದಿದೆ.

ರವಿವಾರ ಕಟಪಾಡಿ ಎಸ್ವಿಎಸ್ ಪಳ್ಳಿಗುಡ್ಡೆ ಮೈದಾನದಲ್ಲಿ ಜರುಗಿದ ತ್ರೋಬಾಲ್ ಪಂದ್ಯಾಟದಲ್ಲಿ ಹಿರ್ಗಾನ ಸಂತ ಮರಿಯಾ ಗೊರೆಟ್ಟಿ ಚರ್ಚ್ ಹಾಗೂ ಕ್ರಿಕೆಟ್ ಪಂದ್ಯಾಟದಲ್ಲಿ ಉದ್ಯಾವರ ಸಂತ ಝೇವಿಯರ್ ಚರ್ಚ್ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉಡುಪಿ ಧರ್ಮ ಪ್ರಾಂತದ ವಿಕಾರ್ ಜನರಲ್ ಮೋನ್ಸಿಂಜೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಬಹುಮಾನ ವಿತರಿಸಿದರು. ಉಡುಪಿ ಧರ್ಮಪ್ರಾಂತದ ಕುಲಪತಿ ವಂ.ಡಾ.ರೋಶನ್ ಡಿಸೋಜ ಮಾತನಾಡಿದರು.

ಹೊಲಿ ಕ್ರಾಸ್ ಸ್ಟೂಡೆಂಟ್ಸ್ ಹೋಮ್ ನಿರ್ದೇಶಕ ವಂ.ರೋನ್ಸನ್ ಡಿಸೋಜ, ಕೋಟೆ ಗ್ರಾಪಂ ಅಧ್ಯಕ್ಷೆ ಪ್ರಮೀಳಾ ಜತ್ತನ್ನ, ಕಟಪಾಡಿ ಗ್ರಾಪಂ ಅಧ್ಯಕ್ಷೆ ಪ್ರಭಾ ಶೆಟ್ಟಿ, ಚರ್ಚಿನ ಧರ್ಮಗುರು ವಂ.ರಾಜೇಶ್ ಪಸನ್ನ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಬ್ರಾಯನ್ ಕೊರೆಯಾ, ಕಾರ್ಯದರ್ಶಿ ತೆರೆಸಾ ಲೋಬೊ, 20 ಆಯೋಗಗಳ ಸಂಯೋಜಕರಾದ ಲೂಯಿಸ್ ಡಿಸಿಲ್ವ, ಪಂದ್ಯಾಟದ ಸಂಚಾಲಕ ಕಿರಣ್ ಲೂವಿಸ್ ಉಪಸ್ಥೀತರಿದ್ದರು.

ಅನಿತಾ ಆಳ್ವ ಸ್ವಾಗತಿಸಿದರು. ವಿಲ್ಫ್ರೆಡ್ ಲೂವಿಸ್ ವಂದಿಸಿದರು. ಫ್ರೀಡಾ ಪಿಂಟೊ ವಿಜೇತರ ಪಟ್ಟಿಯನ್ನು ವಾಚಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News