ಎಸ್.ಎಲ್.ಆರ್.ಎಂ. ಕಾರ್ಯಕರ್ತರ ಜಿಲ್ಲಾ ಒಕ್ಕೂಟದ ಅಧ್ಯಕ್ಷೆಯಾಗಿ ಮಾಧವಿ ಮುಡಾರು ಆಯ್ಕೆ
Update: 2023-10-12 12:53 IST
ಕಾರ್ಕಳ, ಅ.12: ಎಸ್.ಎಲ್.ಆರ್.ಎಂ. ಕಾರ್ಯಕರ್ತರ ಉಡುಪಿ ಜಿಲ್ಲಾ ಒಕ್ಕೂಟದ ಅಧ್ಯಕ್ಷೆಯಾಗಿ ಕಾರ್ಕಳ ತಾಲೂಕಿನ ಮುಡಾರು ಗ್ರಾಮ ಪಂಚಾಯತ್ ನಲ್ಲಿ ಎಸ್.ಎಲ್.ಆರ್.ಎಂ. ಘಟಕದ ಮೇಲ್ವಿಚಾರಕಿ ಮಾಧವಿ. ಕೆ ಮುಂದಿನ ಮೂರು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷೆಯಾಗಿ ಧನಲಕ್ಷ್ಮೀ ಬೆಳ್ಳೆ, ಪ್ರಧಾನ ಕಾರ್ಯದಶಿಯಾಗಿ ಕಿಶೋರ್ ಶಿರ್ವ, ಕಾರ್ಯದರ್ಶಿಯಾಗಿ ಸುನೀತಾ ಮರವಂತೆ, ಕೋಶಾಧಿಕಾರಿಯಾಗಿ ಲಕ್ಷ್ಮೀ ಕೊಡಿಬೆಟ್ಟು, ಸುಜಯಾ ಕುಕ್ಕುಂದೂರು, ಸಂಘಟನಾ ಕಾರ್ಯದರ್ಶಿಗಳಾಗಿ ರಾಜೇಶ್ ವರಂಗ, ಶಿಶಿರ್ ಬೊಮ್ಮರಬೆಟ್ಟು, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ರೇವತಿ ತೆಕ್ಕಟ್ಟೆ, ಶ್ಯಾಮಲಾ ನಾವುಂದ, ಕ್ರೀಡಾ ಕಾರ್ಯದರ್ಶಿಗಳಾಗಿ ಅಬ್ದುಲ್ ರಿಯಾಝ್ ಮರ್ಣೆ ಹಾಗೂ ಶರಾವತಿ ಶಂಕರನಾರಾಯಣ ಆಯ್ಕೆಯಾಗಿದ್ದಾರೆ.