ಕಾರ್ಕಳ: ಕರ್ನಾಟಕ ರಾಜ್ಯ ಮಹಿಳಾ ಒಕ್ಕೂಟದಿಂದ 'ಅರಿವಿನ ಪಯಣ' ಲಿಂಗ ಸಂವೇದನಾ ಜಾಗೃತಿ ಅಭಿಯಾನ
ಕಾರ್ಕಳ, ನ.12: ಲಿಂಗ ಅಸಮಾನತೆಯ ವಿರುದ್ಧ ಜನತೆಗೆ ಅರಿವು ಮೂಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮಹಿಳಾ ಒಕ್ಕೂಟವು ಕಾರ್ಕಳದ ಶ್ರೀಭುವನೇಂದ್ರ ಪಿಯು ಕಾಲೇಜು, ನಿಟ್ಟೆ ಪಿಯು ಕಾಲೇಜು ಮತ್ತು ತೆಳ್ಳಾರಿನ ಶಬರಿ ಮಹಿಳಾ ಹಾಸ್ಟೆಲ್ ಸಹಯೋಗದಲ್ಲಿ 'ಅರಿವಿನ ಪಯಣ' ಎಂಬ ಕಾರ್ಯಕ್ರಮ ಆಯೋಜಿಸಿತ್ತು.
ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಸಾಹಿತಿ ಜ್ಯೋತಿ ಗುರುಪ್ರಸಾದ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜ ಮತ್ತು ಸಹಬಾಳ್ವೆ ಕಾರ್ಕಳದ ಸದಸ್ಯ ಶ್ರೀಕುಮಾರ್ ಉಪಸ್ಥಿತರಿದ್ದರು.
ಅಖಿಲಾ, ಪ್ರಭಾ, ರಿಹಾನ, ಲಿನೆಟ್, ಹುಮೈರಾ, ಮಲ್ಲಿಕಾ, ಲಾವಣ್ಯಾ ಇವರು ತಂಡದ ಪ್ರತಿನಿಧಿಗಳಾಗಿ ಸಂವಾದ, ನಾಟಕ, ಹಾಡುಗಳ ಮೂಲಕ ವಿದ್ಯಾರ್ಥಿನಿಗಳಲ್ಲಿ ಅರಿವು ಮೂಡಿಸಿದರು.
ಒಟ್ಟು 700 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕರ್ನಾಟಕ ರಾಜ್ಯ ಮಹಿಳಾ ಒಕ್ಕೂಟವು 'ಅರಿವಿನ ಪಯಣ' ಎಂಬ ಶೀರ್ಷಿಕೆಯಲ್ಲಿ ರಾಜ್ಯಾದ್ಯಂತ ಲಿಂಗ ಸಂವೇದನಾ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ.