ಸ್ವಾತಂತ್ರ ಸೇನಾನಿಗಳ ನೆನಪಿನಲ್ಲಿ ಅಮೃತಾಂಜಲಿ ಕಾರ್ಯಕ್ರಮ
ಶಿರ್ವ, ನ.27: ಇಂದಿನ ಯುವಜನತೆ ನಮ್ಮ ಹಿರಿಯರು ಹಾಕಿಕೊಟ್ಟ ದಾರಿ ಯಲ್ಲಿ ಬದ್ಧತೆಯೊಂದಿಗೆ ಸಾಧನೆ ಮಾಡಿದರೆ ದೇಶದ ಭವಿಷ್ಯ ಉಜ್ವಲವಾಗ ಲಿದೆ. ರಾಷ್ಟ್ರಕ್ಕೆ ಸಮರ್ಪಿತವಾದ ಬದುಕು ಧನ್ಯ ಎಂದು ಬ್ರಹ್ಮಾವರ ಡಿಪ್ಲೋಮಾ ಕೃಷಿ ಮಹಾವಿದ್ಯಾಲಯದ ಪಾಂಶುಪಾಲ ಡಾ.ಸುಧೀರ್ ಕಾಮತ್ ಕೆ.ವಿ. ಹೇಳಿದ್ದಾರೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತುತಿ ಕಾಪು ತಾಲೂಕು ಘಟಕದ ವತಿಯಿಂದ ಶಿರ್ವ ಮಿತ್ರಬೆಟ್ಟು ಕಾಮತ್ ಕುಟುಂಬಸ್ಥರ ಮೂಲ ಮನೆಯಲ್ಲಿ ನಡೆದ ಸ್ವಾತಂತ್ರ ಸೇನಾನಿಗಳ ನೆನಪಿನಲ್ಲಿ ಅಮೃತಾಂಜಲಿ -ಸ್ವಾತಂತ್ರ್ಯ ವೀರರಾದ ಮಿತ್ರಬೆಟ್ಟು ಕಾಮತ್ ಮನೆತನದ ಕಟಪಾಡಿ ಗೋಪಾಲಕೃಷ್ಣ ಕಾಮತ್, ಕಟಪಾಡಿ ವೆಂಕಟರಾಯ ಕಾಮತ್ ಮತ್ತು ಕಟಪಾಡಿ ವಿಠೋಭ ಕಾಮತ್ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿರ್ವ ಗ್ರಾಪಂ ಅಧ್ಯಕ್ಷೆ ಸವಿತಾ ರಾಜೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ನಿರ್ದೇಶಕ ಎ.ಯೋಗೀಶ್ ಹೆಗ್ಡೆ, ಬಂಟಕಲ್ಲು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಬಂಟಕಲ್ಲು ಮಾಧವ ಕಾಮತ್ ನುಡಿನಮನ ಸಲ್ಲಿಸಿದರು. ಗಾಯಕ ಗಣೇೀಶ್ ಗಂಗೊಳ್ಳಿ ಅವರಿಂದ ದೇಶಭಕ್ತಿ ಗೀತಗಾಯನ ನಡೆಯಿತು.
ಸ್ವಾತಂತ್ರ್ಯ ಹೋರಾಟಗಾರ ಕಟಪಾಡಿ ದಿ.ವಿಠೋಭ ಕಾಮತ್ ಅವರ ಪತ್ನಿ ಭಾರತಿ ಮತ್ತು ಕಟಪಾಡಿ ದಿ.ಗೋಪಾಲಕೃಷ್ಣ ಕಾಮತ್‌ರವರ ಪುತ್ರ ಅಮೃತ್ ಕಾಮತ್ ಅವರನ್ನು ಸ್ವಾತಂತ್ರ್ಯ ಸೇನಾನಿಗಳ ಸ್ಮರಣೆಯಲ್ಲಿ ಕಸಾಪ ತಾಲೂಕು ಘಟಕದ ವತಿಯಿಂದ ಸಮ್ಮಾನಿಸಲಾಯಿತು.
ಶಿರ್ವ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಆರ್.ಪಾಟ್ಕರ್, ಮಿತ್ರಬೆಟ್ಟು ಕಾಮತ್ ಮನೆತನದ ವಿಶ್ವಸ್ಥ ನಂದಕಿಶೋರ್ ಕಾಮತ್ ವೇದಿಕೆಯಲ್ಲಿದ್ದರು. ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ರಾದ ಬೆಳ್ಳೆ ಸದಾನಂದ ಶೆಣೈ, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸ ರಾವ್ ಮೊದಲಾದ ವರು ಉಪಸ್ಥಿತರಿದ್ದರು.
ಪಲಿಮಾರು ಸರಕಾರಿ ಪ.ಪೂ.ಕಾಲೇಜಿನ ಪ್ರಾಂಶುಪಾಲೆ ಗ್ರೆಟ್ಟಾ ಮೊರಾಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಅನಂತ ಮೂಡಿತ್ತಾಯ ನಿರೂಪಿಸಿ, ಕಸಾಪ ಕಾಪು ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು. ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕ ಮಧುಕರ್ ಎಸ್.ಕಲ್ಯಾ ಸಹಕರಿಸಿದರು.