×
Ad

ಅಭಿವೃದ್ಧಿ ವಿಚಾರದಲ್ಲಿ ಕುಂದಾಪುರದ ಶಾಸಕರ ರಾಜಕೀಯ: ಮೊಳಹಳ್ಳಿ ದಿನೇಶ್ ಹೆಗ್ಡೆ ಆರೋಪ

Update: 2023-11-28 19:20 IST

ಕುಂದಾಪುರ : ಪ್ರಸಕ್ತ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ನಾಯಕರುಗಳ ವಿಶೇಷ ಮುತುವರ್ಜಿಯಿಂದ ಸಿಎಸ್‌ಆರ್ ಅನುದಾನದಡಿ ಅಮವಾಸ್ಯೆಬೈಲು ಗ್ರಾಪಂಗೆ ಸುಮಾರು 25 ಲಕ್ಷ ಅನುದಾನ ಮಂಜೂರಾಗಿದ್ದು, ಕರಾವಳಿಯ ಆರಾಧ್ಯ ದೈವಿ ಪುರುಷರಾದ ಕೋಟಿ ಚನ್ನಯ್ಯರ ಗರಡಿಗೆ ಈ ಅನುದಾನದಡಿ 5 ಲಕ್ಷ ರೂ. ಮಂಜೂರಾಗಿದೆ. ಆದರೆ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧಿಕಾರಿಗಳ ಮೇಲೆ ಒತ್ತಡ ತಂದು ಈ ಅನುದಾನದ ಮಂಜೂರಾತಿಗೆ ತಡೆ ಒಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮೊಳಹಳ್ಳಿ ದಿನೇಶ್ ಹೆಗ್ಡೆ ಆರೋಪಿಸಿದ್ದಾರೆ.

ಕುಂದಾಪುರದ ಶಾಸಕರ ಹುಟ್ಟೂರಾದ ಅಮಾವಾಸ್ಯೆಬೈಲಿನ ಅಭಿವೃದ್ಧಿಯಲ್ಲಿ ಸುದೀರ್ಘ ಅವಧಿಯ ರಾಜಕಾರಣಿ ಹಾಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರ ಕೊಡುಗೆ ಶೂನ್ಯ. ಯಾವತ್ತೂ ಅಭಿವೃದ್ಧಿಯ ವಿರೋಧಿ ಮನಸ್ಥಿತಿಯ ಶಾಸಕರು ಇನ್ನಾದರೂ ತನ್ನ ಮನಸ್ಥಿತಿಯನ್ನು ಬದಲಾಯಿಸಿ ಅಭಿವೃದ್ಧಿಯ ಪರ ನಿಲ್ಲಲು ಸಾಧ್ಯವಾಗದೆ ಇದ್ದರೂ ತನ್ನೂರಿನ, ತನ್ನ ಕ್ಷೇತ್ರದ ಅಭಿವೃದ್ಧಿಗೆ ತಡೆಯೋಡ್ದುವ ಕಾರ್ಯವನ್ನು ನಿಲ್ಲಿಸಬೇಕು. ಇಲ್ಲದೆ ಇದ್ದಲ್ಲಿ ಶಾಸಕರ ಅಭಿವೃದ್ಧಿ ವಿರೋಧಿ ಮನಸ್ಥಿತಿಯ ವಿರುದ್ಧ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News