ಆತ್ಮ ರಕ್ಷಣೆ ಕಲೆಯಿಂದ ಆತ್ಮ ಸ್ಥೈರ್ಯ ವೃದ್ಧಿ: ನ್ಯಾ.ಪ್ರೇಮಾ
ಉಡುಪಿ, ಡಿ.3: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಒಂದು ವಾರಗಳ ಕಾಲ ನಡೆದ ಮಿಷನ್ ಸಾಹಸಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ನಿಲಯದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಉಡುಪಿ ಗ್ರಾಹಕರ ನ್ಯಾಯಾಲಯದ ನ್ಯಾಯಾಧೀಶೆ ಪ್ರೇಮಾ ಮಾತನಾಡಿ, ಇಂತಹ ರಚನಾತ್ಮಕ ಮತ್ತು ವಿಶಿಷ್ಟವಾದ ಕಾರ್ಯ ಕ್ರಮವು ವಿದ್ಯಾರ್ಥಿನಿಯರಲ್ಲಿ ಆತ್ಮ ರಕ್ಷಣೆ ಕಲೆಯೊಂದಿಗೆ ಆತ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದರು.
ಇದೇ ವೇಳೆ ವಿದ್ಯಾರ್ಥಿನಿಯರು ಸಾಹಸಿ ಪ್ರದರ್ಶನವನ್ನು ನಡೆಸಿದರು. ಇದರಲ್ಲಿ ಚೂರಿ ಇರಿತ, ಚೈನ್ ಸ್ನಾಚ್ಸಿಂಗ್ ಸಂದರ್ಭ ಮತ್ತು ಅನೇಕ ರೀತಿಯ ಸ್ವರಕ್ಷಣಾ ತಂತ್ರಗಳನ್ನು ತೋರ್ಪಡಿಸಲಾಯಿತು.
ಫೀನಿಕ್ಸ್ ಅಕಾಡೆಮಿ ಇಂಡಿಯಾದ ಸದಸ್ಯರಾದ ಲಕ್ಷ್ಮಿಕಾಂತ್, ಎಂಜಿಎಂ ವಿದ್ಯಾರ್ಥಿನಿ ನಿಲಯದ ನಿರ್ವಾಹಕಿ ಲತಾ, ಕಾರ್ಯದರ್ಶಿ ಸಾನ್ವಿ, ಎಬಿವಿಪಿ ಜಿಲ್ಲಾ ಸಂಚಾಲಕ ಗಣೇಶ್ ಪೂಜಾರಿ, ತಾಲೂಕು ಸಂಚಾಲಕ ಅಜಿತ್ ಜೋಗಿ, ಪ್ರಮುಖ ರಾದ ನವೀನ್, ಸ್ವಸ್ತಿಕ್, ಅನಂತಕೃಷ್ಣ ಉಪಸ್ಥಿತರಿದ್ದರು.
ಎಬಿವಿಪಿ ಉಡುಪಿ ನಗರ ಕಾರ್ಯದರ್ಶಿ ಶ್ರೀವತ್ಸ ಡಿ.ಗಾಂವ್ಸ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶ್ರವಣಿ ವಂದಿಸಿದರು. ಮಾಣಿಕ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.