×
Ad

ಮಕ್ಕಳು ಪೋಷಕರ ಆಸೆ ಈಡೇರಿಸುವ ಯಂತ್ರಗಳಲ್ಲ: ಡಾ.ರಾಜಶೇಖರ್

Update: 2023-12-04 19:35 IST

ಕುಂದಾಪುರ: ಯುವ ಸಮುದಾಯವನ್ನು ಯಂತ್ರ ಎಂದು ಭಾವಿಸಿ ಕೊಂಡು ನಮ್ಮ ಕನಸು, ಆಸೆಗಳನ್ನು ಈಡೇರಿ ಸಲು ಮಾನಸಿಕ ಒತ್ತಡದಲ್ಲಿ ಮುಳುಗಿಸುತ್ತಿರುವುದು ದುರಂತ. ಮಕ್ಕಳು ತಂದೆ-ತಾಯಂದಿರ ಆಸೆ, ಕನಸುಗಳನ್ನು ಈಡೇರಿಸು ವಂತಹ ಯಂತ್ರಗಳಲ್ಲ ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರಾಜಶೇಖರ್ ಹೇಳಿದ್ದಾರೆ.

ವಕ್ವಾಡಿಯ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ 18ನೇ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು. ಮಕ್ಕಳಿಗೆ ಅಂಕಗಳ ಹಿಂದೆ ಓಡುವುದನ್ನು ರೂಢಿ ಮಾಡಿಸುತ್ತಿದ್ದು, ಇಂತಹ ಒತ್ತಡ ದಿಂದಲೇ ಎಳೆಯ ಪ್ರಾಯದಲ್ಲೇ ಖಿನ್ನತೆಗೊಳಗಾಗುತ್ತಿದ್ದಾರೆ. ಈ ಬಗ್ಗೆ ಹಿರಿಯರು ಆತ್ಮಾವಲೋಕನ ಮಾಡಬೇಕು. ಜ್ಞಾನದ ಜೊತೆ ಜೊತೆಯಲ್ಲಿ ಜೀವನ ಮೌಲ್ಯ, ದೇಶದ ಸಂಸ್ಕೃತಿ, ಪರಂಪರೆ, ಸನ್ನಡತೆ, ಮಾನವೀಯತೆಯನ್ನು ಬೆಳೆಸುವ ಶಿಕ್ಷಣ ಅತ್ಯಗತ್ಯ ಎಂದರು.

ಅಧ್ಯಕ್ಷತೆಯನ್ನು ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಸಂಸ್ಥಾಪಕ ಬಿ.ಅಪ್ಪಣ್ಣ ಹೆಗ್ಡೆ ವಹಿಸಿದ್ದರು. ಟ್ರಸ್ಟ್ ಕಾರ್ಯನಿರ್ವಾಹಕರಾದ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಎಸ್.ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಅವಿನಾಶ್, ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಮೋಹನ್ ಕೆ. ವರದಿ ವಾಚಿಸಿದರು. ಹರ್ಷಿತಾ ಶೇಟ್ ಸ್ವಾಗತಿಸಿ, ಧವಳ್ ಎಸ್.ಶೆಟ್ಟಿ ವಂದಿಸಿದರು. ಫ್ರೆನಿಟಾ ಡಿಕೋಸ್ಟಾ ಪರಿಚಯಿಸಿದರು. ಸುಷ್ಮಾ ಎಸ್. ವಿಜೇತರ ಪಟ್ಟಿ ವಾಚಿಸಿದರು. ಶ್ರೀಮಾನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News