×
Ad

ಎಸ್‌ಬಿಐ ಗ್ರಾಹಕರ ಮಾಹಿತಿ ಕಾರ್ಯಾಗಾರ

Update: 2023-12-06 18:51 IST

ಉಡುಪಿ, ಡಿ.6: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಡುಪಿ ಪ್ರಾದೇಶಿಕ ಕಚೇರಿ ವತಿಯಿಂದ ಗ್ರಾಹಕರ ಮಾಹಿತಿ ಕಾರ್ಯಾ ಗಾರವು ಡಿ.5ರಂದು ಉಡುಪಿಯ ಓಶಿಯನ್ ಪರ್ಲ್ ಹೊಟೇಲಿನ ಸಭಾಂಗಣದಲ್ಲಿ ಜರಗಿತು.

ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕ ಪ್ರಬಂಧಕಿ ಶೋಭಲತಾ ದೇವಿ ಮಾತನಾಡಿ, ನಮಗೆ ಗ್ರಾಹಕರ ಹಿತಾಸಕ್ತಿ ಅತ್ಯಂತ ಮುಖ್ಯ. ಅವರಿಗೆ ಗುಣ ಮುಟ್ಟದ ಸೇವೆ ನೀಡುವುದೇ ನಮ್ಮ ಗುರಿಯಾಗಿದೆ. ಅದೇ ರೀತಿ ನಮ್ಮ ಕೆಲಸದ ಬಗ್ಗೆ ಗ್ರಾಹಕರ ಪ್ರತಿಕ್ರಿಯೆ ಕೂಡ ಬೇಕು ಎಂದು ಹೇಳಿದರು.

ಬ್ಯಾಂಕಿನ ಉಪ ಪ್ರಬಂಧಕ ಸಂತೋಷ್ ದೊರೈ, ಬ್ಯಾಂಕಿನ ಆನ್‌ಲೈನ್ ವ್ಯವಹಾರ ಮತ್ತು ವಂಚನೆ, ಓಟಿಪಿ ಬಗ್ಗೆ ಎಚ್ಚರಿಕೆ ಸೇರಿದಂತೆ ಹಲವು ಮಾಹಿತಿ ಗಳನ್ನು ಗ್ರಾಹಕರಿಗೆ ನೀಡಿದರು. ಈ ಸಂದರ್ಭದಲ್ಲಿ ಶಾಖಾ ಪ್ರಬಂಧಕರಾದ ಸಂದೀಪ್ ಶೆಣೈ, ವೇಣುಗೋಪಾಲ್ ಕೆ.ವಿ., ಸಂಚಯಿತಾ ಸರ್ಕರ್, ಆರ್‌ಬಿಓ ಅಧಿಕಾರಿ ಮಹಾದೇವಮ್ಮ, ಕಮಲಾಕ್ಷ, ರಘು ಉಪಸ್ಥಿತರಿದ್ದರು. ಸುಶ್ಮಾ ರತನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News