ಅಂದರ್ ಬಾಹರ್: ಐವರ ಬಂಧನ
Update: 2023-12-10 20:52 IST
ಕುಂದಾಪುರ, ಡಿ.10: ಗುಲ್ವಾಡಿ ಗ್ರಾಮದ ಕರ್ಕಿಯ ಶಾಂತಲಾ ಕೋಳಿ ಫಾರ್ಮ್ ಬಳಿ ಡಿ.9ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಐವರನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ರಾಜೇಶ, ರಾಜೇಶ್, ಚಂದ್ರ, ಸುಚೇಂದ್ರ, ಉಮೇಶ ಬಂಧಿತ ಆರೋಪಿಗಳು. ಇವರಿಂದ 6,400ರೂ. ನಗದು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.