ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಪೂರ್ವಭಾವಿ ಸಭೆ
ಉಡುಪಿ, ಡಿ.11: ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಉಡುಪಿ ಜಿಲ್ಲೆ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ನಡೆಯುವ ಅಧಿವೇಶನದ ಪೂರ್ವ ಭಾವಿ ತಯಾರಿಯ ಸಭೆ ಉಡುಪಿ ವಿಮಾ ನೌಕರರ ಸಂಘದ ಹಾಲ್ ನಲ್ಲಿ ಡಿ.9ರಂದು ಜರಗಿತು.
ಅರಿವಿನ ಪಯಣ ಸಪ್ತಾಹ ಕಾರ್ಯಕ್ರಮದ ಕುರಿತು ವರದಿ ಮಂಡನೆ ಮಾಡಿ ಚರ್ಚಿಸಲಾಯಿತು. ಮಂದಿನ ದಿನಗಳಲ್ಲಿಯೂ ಅರಿವಿನ ಪಯಣ ಕಾರ್ಯ ಕ್ರಮವನ್ನು ನಡೆಸುವ ಬಗ್ಗೆ ಬಹುಮತದ ತೀರ್ಮಾನ ತೆಗೆದುಕೊಳ್ಳಲಾಯಿತು. ಕೌದಿ ಹೊಲಿಯು ವುದು, ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ, ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ, ಜಾತಿಯತೆ ಹೋಗಲಾಡಿಸುವ ಬಗ್ಗೆ ಚರ್ಚಿಸಲಾಯಿತು.
ಕೌದಿ ಹೊಲಿಯುವ ಕೆಲಸವನ್ನು ಜ.6ರಂದು ನಡೆಸುವ ಬಗ್ಗೆ ತೀರ್ಮಾನಿಸ ಲಾಯಿತು. ಹಣಕಾಸು, ಪ್ರಚಾರ ಸಮಿತಿಯನ್ನು ರಚಿಸಲಾಯಿತು. ಮಾ.8 ಮತ್ತು 9ರಂದು ಮಹಿಳಾ ಸಮ್ಮೇಳನದ ದಿನಾಂಕವನ್ನು ನಿಗದಿಪಡಿಸಲಾಯಿತು. ಹೊರ ರಾಜ್ಯದ ಅತಿಥಿಯನ್ನು ಕರೆಯಲು ಹೆಸರಿನ ಪಟ್ಟಿಯನ್ನು ತಯಾರಿಸ ಲಾಯಿತು.
ಲೇಖಕಿ ಸಬಿಹಾ ಭೂಮಿ ಗೌಡ, ವಾಣಿ ಪೆರಿಯೋಡಿ, ಲಿನೆಟ್, ಪ್ರಭಾ ಬೆಂಗಳೂರು, ಚಿಂತಕ ಪ್ರೊ.ಫಣಿರಾಜ್, ನಾಗೇಶ್ ಉದ್ಯಾವರ, ಸುನೀತಾ ಡಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ವೆರೋನಿಕಾ ಕರ್ನೆಲಿಯೋ ಸ್ವಾಗತಿಸಿದರು. ಗೀತಾ ವಾಗ್ಲೆ ವಂದಿಸಿದರು.