×
Ad

ಆತ್ಮಹತ್ಯೆ ತಡೆಗಟ್ಟುವ ಕ್ರಮಗಳ ಕುರಿತು ಕಾರ್ಯಾಗಾರ

Update: 2023-12-11 17:09 IST

ಮಣಿಪಾಲ: ಮಣಿಪಾಲ ಕೆ.ಎಂ.ಸಿ. ಸಮುದಾಯ ವೈದ್ಯಕೀಯ ವಿಭಾಗದದಲ್ಲಿ ಆತ್ಮಹತ್ಯೆಯನ್ನು ತಡೆಗಟ್ಟುವ ಕ್ರಮಗಳು ಹಾಗೂ ಇದರಲ್ಲಿ ಸಮುದಾಯದ ಮಧ್ಯಸ್ಥಗಾರರ ಪಾತ್ರ ಎಂಬ ವಿಷಯದ ಕುರಿತ ಕಾರ್ಯಗಾರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಈ ಕಾರ್ಯಗಾರದಲ್ಲಿ ಕೆಎಂಸಿ ಮಣಿಪಾಲದ ಮನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ರಾಜೇಶ್ ಕೃಷ್ಣ ಭಂಡಾರಿ ಹಾಗೂ ಪ್ರವೀಣ್ ಪಿ. ಸಂಪನ್ಮೂಲ ವ್ಯಕಿತಿಯಾಗಿ ಭಾಗವಹಿಸಿದರು. ವಿಭಾಗ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ಹಾಗೂ ಅಡಿಶನಲ್ ಪ್ರೊಫೇಸರ್ ಡಾ.ಚೈತ್ರ ಆರ್.ರಾವ್ ಉಪಸ್ಥಿತರಿದ್ದರು.

ಕಾರ್ಯಗಾರದಲ್ಲಿ ಉಡುಪಿ ನಗರಸಭೆಯ ಸದಸ್ಯರು, ವಿವಿಧ ಗ್ರಾಮ ಪಂಚಾಯತ್ ಸದಸ್ಯರು, ಸಮಾಜ ಸೇವಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸೇರಿದಂತೆ ಸುಮಾರು 90 ಜನರು ಭಾಗವಹಿಸಿದ್ದರು.

ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಕಿರು ನಾಟಕ ನಡೆಯಿತು. ಸಾಮಾಜಿಕ ಕಾರ್ಯಕರ್ತೆ ನೀಲಾವತಿ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಹಾಗೂ ಆರೋಗ್ಯ ನಿರೀಕ್ಷಕ ನವೀನ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News