×
Ad

ಪ್ರತ್ಯೇಕ ಪಕರಣ: ಇಬ್ಬರ ನಾಪತ್ತೆ

Update: 2023-12-15 21:28 IST

ಕಾರ್ಕಳ, ಡಿ.15: ಪಿಲಾರು ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಕೆಲಸ ಮಾಡುತ್ತಿದ್ದ ನಂದಳಿಕೆ ಗ್ರಾಮದ ಅಂಬಾಡಾಗಿ ನಿವಾಸಿ ವಿಠಲ ಆಚಾರ್ಯ(56) ಎಂಬವರು ಡಿ.12ರಂದು ಬೆಳಿಗ್ಗೆ ಬೇರೆ ಕೆಲಸ ಇರುವುದಾಗಿ ಹೇಳಿ ಮಾಲಕ ರಲ್ಲಿ ತಿಳಿಸಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ಮಾನಸಿಕ ಖಿನ್ನತೆಗೆ ಒಳಗಾಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ಕೊಡ ವೂರು ಗ್ರಾಮದ ಶಿವು ಕುಮಾರ(35) ಎಂಬವರು ಡಿ.11ರಂದು ಆಸ್ಪತ್ರೆಯಿಂದ ಯಾರಿಗೂ ಹೇಳದೇ ಹೊರಗೆ ಹೋದವರು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News