×
Ad

ಮೆಸ್ಕಾಂನಿಂದ ಉಡುಪಿ ವೃತ್ತದ ಎಚ್‌ಟಿ ಗ್ರಾಹಕರ ಸಂವಾದ ಕಾರ್ಯಕ್ರಮ

Update: 2023-12-19 18:25 IST

ಉಡುಪಿ : ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಉಡುಪಿ ವೃತ್ತದ ಎಚ್‌ಟಿ ಗ್ರಾಹಕರ ಸಂವಾದ ಕಾರ್ಯ ಕ್ರಮವು ಅಂಬಲಪಾಡಿ ಶ್ಯಾಮಿಲಿ ಸಭಾಭವನದಲ್ಲಿ ಮಂಗಳವಾರ ಜರಗಿತು

ಕಾರ್ಯಕ್ರಮವನ್ನು ಉದ್ಘಾಟಿಸಿದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ, ಎಚ್‌ಟಿ ಗ್ರಾಹಕರ ಜೊತೆಯಲ್ಲಿ ಸಂವಾದ ನಡೆಸಿ ಹಲವು ಸಮಸ್ಯೆ ಗಳಿಗೆ ಕೂಡಲೇ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಉಡುಪಿ ಜೆಲ್ಲೆಯ ವಿದ್ಯುತ್ ಸಮಸ್ಯೆಗಳಾದ ಲೋ ವೋಲ್ಟೇಜ್, ವಿದ್ಯುತ್ ವ್ಯತ್ಯಯ ಸಮಸ್ಯೆ ಸರಿಪಡಿಸುವಂತೆ ಹಾಗೂ ಕೈಗಾರಿಗಳಿಗೆ ನಿರಂತರ ವಿದ್ಯುತ್ ಪೂರೈಸುವಂತೆ ಗ್ರಾಹಕರು ಒತ್ತಾಯಿಸಿದರು

ವೇದಿಕೆಯಲ್ಲಿ ಮಂಗಳೂರು ಮೆಸ್ಕಾಂ ನಿರ್ದೇಶಕ(ತಾಂತ್ರಿಕ) ರಮೇಶ ಎಚ್.ಜೆ., ಮುಖ್ಯ ಆರ್ಥಿಕ ಅಧಿಕಾರಿ ಜಗದೀಶ್ ಬಿ., ಮಂಗಳೂರು ವಲಯ ಮುಖ್ಯ ಇಂಜಿನಿಯರ್ ಪುಷ್ಪಾಎಸ್., ನಿಯಂತ್ರಣಾಧಿಕಾರಿ ಮೌರಿಸ್ ಡಿಸೋಜ, ಉಡುಪಿಯ ಅಧೀಕ್ಷಕ ಇಂಜಿನಿಯರ್ ಪಿ.ದಿನೇಶ್ ಉಪಾಧ್ಯ ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯ ಎಚ್.ಟಿ. ಗ್ರಾಹಕರ ಪರವಾಗಿ ರಾಜೇಂದ್ರ ಸುವರ್ಣ, ಉದಯ ಕುಮಾರ್, ಹರೀಶ್ ಕುಂದರ್, ಕೃಷ್ಣ ಪ್ರಸಾದ್, ವಿಜಯ ಪ್ರಕಾಶ್, ವಲ್ಲಭ ಭಟ್, ಪ್ರಶಾಂತ್ ಮಾತನಾಡಿದರು.

ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಪ್ರಸನ್ನ ಕುಮಾರ್ ಸ್ವಾಗತಿಸಿದರು. ಸಹಾಯಕ ಇಂಜಿನಿಯರ್ ರಾಜೇಶ್ವರಿ ಪ್ರಾರ್ಥನೆಗೈದರು. ವಿನಾಯಕ್ ಕಾಮತ್ ಹಾಗೂ ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ರಮೇಶ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News