×
Ad

ಮಣಿಪಾಲ: ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಗಾರ

Update: 2023-12-21 19:37 IST

ಉಡುಪಿ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗವು ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಿತ್ತು.

ಕಾರ್ಯಾಗಾರದಲ್ಲಿ ಕಸ್ತೂರ್ಬಾ ಆಸ್ಪತ್ರೆಯ 500ಕ್ಕೂ ಅಧಿಕ ಆರೋಗ್ಯೇತರ ಮಹಿಳಾ ಸಿಬ್ಬಂದಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸಮುದಾಯ ವೈದ್ಯಕೀಯ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾದ ಡಾ.ಅಶ್ವಿನಿ ಕುಮಾರ್ ಮತ್ತು ಹೆಚ್ಚುವರಿ ಪ್ರಾಧ್ಯಾಪಕ ಡಾ.ರಂಜಿತಾ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಕೆಎಂಸಿಯ ಮಾನವ ಸಂಪನ್ಮೂಲ ವಿಭಾಗದ ಸಹಯೋಗದೊಂದಿಗೆ ನಡೆಸಲಾಯಿತು.

ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ದಿವ್ಯಾ ಪೈ ಮತ್ತು ಸಹಾಯಕ ಪ್ರಾಧ್ಯಾಪಕರಾದ ಡಾ.ಅಫ್ರಾಜ್ ಜಹಾನ್ ಅವರು ಡಾ.ರತ್ನಾ ಜೆ, ಡಾ.ಸುಮಾ ರಾಮಕೃಷ್ಣ, ಡಾ.ವೈಷ್ಣಾ ಶಂಕರ್ ಮತ್ತು ಡಾ. ಶ್ರೀಕಾ ಅವರು ಸ್ತನ ಕ್ಯಾನ್ಸರ್ ಮಾಹಿತಿಗಳನ್ನು ನೀಡಿದರು.

ಕೆಎಂಸಿ ಆಸ್ಪತ್ರೆಯ ಮಾನವ ಸಂಪನ್ಮೂಲ ವಿಭಾಗದ ಸುಚೇತಾ ನಾಯಕ್ ಮತ್ತು ಸಮುದಾಯ ವೈದ್ಯಕೀಯ ವಿಭಾಗದ ವೈದ್ಯಕೀಯ ಸಮಾಜ ಸೇವಕರಾದ ಪುಷ್ಪಾ, ಆಶಾ ಮತ್ತು ಚಿತ್ರಾ ಅವರು ಭಾಗವಹಿಸಿದ್ದರು.

ಈ ಅವಧಿಯಲ್ಲಿ ಸ್ವಯಂ-ಸ್ತನ ಪರೀಕ್ಷೆಯ ಮೂಲಕ ಸ್ತನ ಕ್ಯಾನ್ಸರ್‌ನ ಲಕ್ಷಣಗಳನ್ನು ಮೊದಲೇ ಪತ್ತೆಹಚ್ಚುವ ಬಗ್ಗೆ ತಿಳಿಸಲಾಯಿತು. ಸ್ವಯಂ ಸ್ತನ ಪರೀಕ್ಷೆಗಾಗಿ ಹ್ಯಾಂಡ್ಸ್-ಆನ್ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಯಿತು.ಫಿಸಿಶಿಯನ್ ಅವರಿಂದ ಸ್ವಯಂ ಸ್ತನ ಪರೀಕ್ಷೆ ಮತ್ತು ವೈದ್ಯರು ಮಾಡುವ ಸ್ತನ ಪರೀಕ್ಷೆಯನ್ನು ವೀಡಿಯೊ ಮೂಲಕ ತೋರಿಸಲಾಯಿತು. ಈ ಕಾಯಿಲೆಗೆ ಸಂಬಂಧಿಸಿದ ಇವರು ಅಪನಂಬಿಕೆಗಳನ್ನು ದೂರ ಮಾಡುವ, ನಿಯಮಿತ ತಪಾಸಣೆ ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News