ಉಡುಪಿ: ನಳ್ಳಿ ನೀರಿನ ಶುಲ್ಕ ಪಾವತಿಗೆ ಸೂಚನೆ
Update: 2023-12-21 20:21 IST
ಉಡುಪಿ, ಡಿ.21: ಉಡುಪಿ ನಗರಸಭೆಯ ನಳ್ಳಿ ನೀರಿನ ಸಂಪರ್ಕ ಪಡೆದು ಕೊಂಡಿರುವ ಗ್ರಾಹಕರು ತಮ್ಮ ನೀರಿನ ಬಳಕೆ ಶುಲ್ಕವನ್ನು ಬಾಕಿ ಇರಿಸಿ ಕೊಂಡಿದ್ದಲ್ಲಿ 2024ರ ಜನವರಿ 5ರ ಒಳಗೆ ಪಾವತಿಸಬೇಕು. ತಪ್ಪಿದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೇ ನಳ್ಳಿನೀರಿನ ಸಂಪರ್ಕವನ್ನು ಕಡಿತ ಗೊಳಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.