ಶಂಕರಪುರ ವಿಶ್ವಾಸದಮನೆ ರಜತ ಮಹೋತ್ಸವ ಸಂಭ್ರಮ ಉದ್ಘಾಟನೆ
ಕಾಪು: ಶಂಕರಪುರ ವಿಶ್ವಾಸದ ಮನೆಯ ಅನಾಥಾಶ್ರಮದ ರಜತ ಮಹೋತ್ಸವದ ಸಂಭ್ರಮ ಕಾರ್ಯಕ್ರಮವನ್ನು ಡಿ.20ರಂದು ಶಂಕರಪುರದ ಕ್ಯಾನರಿ ಗಾರ್ಡನ್‌ನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸಿದರು. ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಉಡುಪಿ ಜಿಲ್ಲಾ ಹಿರಿಯ ನಾಗರಿಕ ಮತ್ತು ಸಬಲೀಕರಣ ಇಲಾಖೆ ಅಧಿಕಾರಿ ರತ್ನ, ಬಹುಭಾಷಾ ನಟ ಸುಮಂತ್ ತಲವಾರ್, ಬಿಗ್ ಜೆ ಟಿವಿಯ ಸಂಸ್ಥಾಪಕ ಪ್ರಶಾಂತ್ ಜತ್ತನ್ನ, ಉದ್ಯಮಿ ಮೋಹನ್ ಶೆಟ್ಟಿ, ಉದ್ಯಮಿ ಮುಸ್ತಾಕ್ ಅಹಮ್ಮದ್, ಉಡುಪಿ ಪಾಸ್ಟರ್ ಅಸೋಶಿಯೇಶನ್ ಅಧ್ಯಕ್ಷ ಪಾ.ಸೆಲ್ವ ಕುಮಾರ್, ಪಾ.ವಿಜೇಂದ್ರ ಪಾರ್ಸೆಕರ್, ಪ್ರೊ.ಶ್ರೀಜಿತ್, ವಿಶ್ವಾಸದ ಮನೆಯ ಎಲಿಜಬೆತ್ ಡಿಸೋಜ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಲ್ಲೆಯ ಸಮಾಜ ಸೇವಕರಾದ ರೋಶನ್ ಬೆಳ್ಮಣ್, ವಿಶು ಶೆಟ್ಟಿ, ನಿತ್ಯಾನಂದ ಒಳಕಾಡು, ರವಿ ಕಟಪಾಡಿ, ಸೂರಿ ಶೆಟ್ಟಿ, ವಿನಯ್ ಸಾಸ್ತಾನ್ ಮತ್ತು ತನುಲಾ ಅವರನ್ನು ಸನ್ಮಾನಿಸಲಾಯಿತು. ವಿಶ್ವಾಸದ ಮನೆಯಲ್ಲಿ ಸೇವೆ ಸಲ್ಲಿಸಿರುವ ಹಾಗೂ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಮತ್ತು ದಾದಿಯ ರನ್ನು ಗೌರವಿಸಲಾಯಿತು. ವಿಶ್ವಾಸದ ಮನೆಯ ಸಂಸ್ಥಾಪಕ ಪಾ.ಸುನೀಲ್ ಜಾನ್ ಡಿಸೋಜ ವಂದಿಸಿದರು.