×
Ad

ಉಡುಪಿ ನಗರಸಭೆ ಉಪಚುನಾವಣೆ: ಕಾಂಗ್ರೆಸ್ ಮತ ಪ್ರಚಾರ

Update: 2023-12-22 19:13 IST

ಉಡುಪಿ, ಡಿ.22: ಉಡುಪಿ ನಗರಸಭೆಯ 13ನೇ ಪೆರಂಪಳ್ಳಿ ವಾರ್ಡಿನ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರುತಿ ಪರವಾಗಿ ಕಾಂಗ್ರೆಸ್ ಮುಖಂಡರು ಇಂದು ಮತಯಾಚನೆ ನಡೆಸಿದರು.

ಕಾಂಗ್ರೆಸ್ ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ರಮೇಶ್ ಕಾಂಚನ್, ಕುಶಲ್ ಶೆಟ್ಟಿ, ಗೀತಾ ವಾಗ್ಳೆ, ಜ್ಯೋತಿ ಹೆಬ್ಬಾರ್, ಪ್ರಖ್ಯಾತ್ ಶೆಟ್ಟಿ ಮನೆ ಮನೆಗಳಿಗೆ ತೆರಳಿ ರಾಜ್ಯ ಸರ್ಕಾರದ ಜನಪರ ಯೋಜನೆ ಹಾಗೂ ಗ್ಯಾರಂಟಿಗಳ ಬಗ್ಗೆ ತಿಳಿಸಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಗಣೇಶ್ ನೆರ್ಗಿ, ಸತೀಶ್ ಕೊಡವೂರು, ಲಕ್ಷ್ಮಣ್ ಪೂಜಾರಿ, ಡಾ.ಸುನಿತಾ ಶೆಟ್ಟಿ, ರೊಶನಿ ಓಲಿವರ್, ಯುವರಾಜ್ ಪುತ್ತೂರು, ಸುರೇಶ್ ಶೆಟ್ಟಿ ಬನ್ನಂಜೆ, ಶಶಿರಾಜ್ ಕುಂದರ್, ಚಂದ್ರಿಕಾ ಶೆಟ್ಟಿ, ಹಮ್ಮದ್, ಯಾದವ್ ಆಚಾರ್ಯ, ಯತೀಶ್ ಕರ್ಕೇರ, ಸುಕೇಶ್ ಕುಂದರ್, ಪ್ರಶಾಂತ್ ಪೂಜಾರಿ, ಲತಾ ಆನಂದ್ ಶೇರಿಗಾರ್, ಹೇಮಲತಾ ಜತ್ತನ್ನ, ರಮೇಶ್ ಪೂಜಾರಿ, ಸತೀಶ್ ಪುತ್ರನ್, ಶರತ್ ಶೆಟ್ಟಿ, ಸುಕನ್ಯಾ ಪೂಜಾರಿ, ಮೀನಾಕ್ಷಿ ಮಾಧವ ಬನ್ನಂಜೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News