×
Ad

ನೇರ ಹಜ್‌ಯಾತ್ರೆಗೆ ಅವಕಾಶ ಕಲ್ಪಿಸುವಂತೆ ಸಚಿವರಿಗೆ ಮನವಿ

Update: 2023-12-28 19:21 IST

ಉಡುಪಿ, ಡಿ.28: ನಮ್ಮ ನಾಡ ಒಕ್ಕೂಟ(ಎನ್‌ಎನ್‌ಓ) ಉಡುಪಿ ಜಿಲ್ಲಾ ಘಟಕದ ನಿಯೋಗ ಬುಧವಾರ ರಾಜ್ಯ ಹಜ್ ಮತ್ತು ಪೌರಾಡಳಿತ ಸಚಿವ ರಹೀಮ್ ಖಾನ್ ಅವರನ್ನು ಭೇಟಿಯಾಗಿ ಮಂಗಳೂರು ವಿಮಾನ ನಿಲ್ದಾಣ ದಿಂದ ನೇರ ಹಜ್‌ಯಾತ್ರೆಗೆ ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಲಾಯಿತು.

ಅದೇ ರೀತಿ ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣದ ಸಚಿವ ಝಮಿರ್ ಅಹ್ಮದ್ ಖಾನ್ ಹಾಗೂ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಇವರನ್ನು ಭೇಟಿಯಾಗಿ ಉಡುಪಿ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಸಮಸ್ಯೆಗಳ ಕುರಿತು ಚರ್ಚಿಸಿ, ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಮನವಿ ಸಲ್ಲಿಸಲಾಯಿತು.

ಉಡುಪಿ ಜಿಲ್ಲೆಗೆ ಭೇಟಿ ನೀಡುವಂತೆ ಸಚಿವರಿಗೆ ಆಹ್ವಾನ ನೀಡಲಾಯಿತು. ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಅನ್ವರ್ ಬಾಷಾ ಅವರನ್ನು ಭೇಟಿ ಯಾದ ನಿಯೋಗ ಉಡುಪಿ ಜಿಲ್ಲೆಯ ವಿವಿಧ ಮಸೀದಿ, ಮದ್ರಸಗಳಿಗೆ ಬಿಡುಗಡೆಯಾಗ ಬೇಕಾದ ಅನುದಾನಗಳನ್ನು ತ್ವರಿತವಾಗಿ ಬಿಡುಗಡೆಗೊಳಿಸು ವಂತೆ ಒತ್ತಾಯಿಸಿತು.

ಉಡುಪಿ ಜಿಲ್ಲಾ ನಮ್ಮ ನಾಡ ಒಕ್ಕೂಟದ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ ನೇತೃತ್ವದ ನಿಯೋಗದಲ್ಲಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ, ಟ್ರಸ್ಟ್ ಸದಸ್ಯ ಪೀರು ಸಾಹೇಬ್ ಉಡುಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಹೀರ್ ನಕೂದಾ ಗಂಗೊಳ್ಳಿ, ಜಿಲ್ಲಾ ಖಜಾಂಚಿ ನಕ್ವ ಯಾಹ್ಯ ಉಡುಪಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News