×
Ad

ಹಾರ್ದಳ್ಳಿ - ಮಂಡಳ್ಳಿ: ವಿಕಾಸಿತ ಭಾರತ ಸಂಕಲ್ಪಯಾತ್ರೆ

Update: 2023-12-28 19:28 IST

ಕುಂದಾಪುರ: ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿಕಾಸಿತ ಭಾರತ ಸಂಕಲ್ಪಯಾತ್ರೆ ಕಾರ್ಯಕ್ರಮ ವನ್ನು ಬುಧವಾರ ಆಯೋಜಿಸಲಾಗಿತ್ತು.

ವಿಕಸಿತ ಭಾರತ ಸಂಕಲ್ಪಯಾತ್ರೆಯನ್ನು ಉದ್ಘಾಟಿಸಿದ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕೇಂದ್ರ ಸರಕಾರದ 70ಕ್ಕೂ ಮಿಕ್ಕಿ ಯೋಜನೆಗಳು ಜನಸಾಮಾನ್ಯರಿಗೆ ತಲುಪುವ ನಿಟ್ಟಿನಲ್ಲಿ, ಕೇಂದ್ರ ಸರಕಾರದ ಜನಪರ ಯೋಜನೆಗಳ ಲಾಭ ಪಡೆದ ಫಲಾನುಭವಿಗಳನ್ನು ಒಗ್ಗೂಡಿಸಿ, ಈ ಯೋಜನೆಗಳಿಂದ ವಂಚಿತರಾದ ಫಲಾನುಭವಿಗಳಿಗೆ ಅದರ ಲಾಭ ಸಿಗುವಂತೆ ಮಾಡುವ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದರು.

ತದನಂತರ ವಿವಿಧ ಇಲಾಖೆಗಳು ಸಮರ್ಪಕವಾಗಿ ಮಾಹಿತಿ ನೀಡಿದರು. 2024ರ ನರೇಂದ್ರ ಮೋದಿಯವರ ಕ್ಯಾಲೆಂಡರ್‌ನ್ನು ಬಿಡುಗಡೆ ಮಾಡಲಾಯಿತು ಮತ್ತು ಪ್ರತಿಜ್ಞ ವಿಧಿಯನ್ನು ಬೋಧಿಸಿದರು. ಇದೇ ವೇಳೆ ಕೃಷಿಗೆ ಸಂಬಂಧ ಪಟ್ಟಂತೆ ಡ್ರೋನ್ ಪ್ರಾತ್ಯಕ್ಷಿಕೆ ನಡೆಯಿತು.

ಲೀಡ್ ಬ್ಯಾಂಕಿನ ಮ್ಯಾನೇಜರ್ ಪಿಂಜಾರ ಜನಕಲ್ಯಾಣಕ್ಕಾಗಿ ಬ್ಯಾಂಕ್ ಕಡೆಯಿಂದ ಸಿಗುವ ವಿವಿಧ ಸಬ್ಸಿಡಿ ಸಾಲ ಸೌಲಭ್ಯಗಳ, ಜನ್‌ಧನ್ ಖಾತೆ, ವಿಶೇಷವಾಗಿ ವಿಶ್ವಕರ್ಮ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಹಾರ್ದಳ್ಳಿ ಮಂಡಳ್ಳಿ ಗ್ರಾಪಂ ಅಧ್ಯಕ್ಷೆ ದೀಪಾ ಶೆಟ್ಟಿ, ಉಪಾಧ್ಯಕ್ಷ ಗಣೇಶ್ ಶೆಟ್ಟಿ, ಬಿದ್ಕಲ್‌ಕಟ್ಟೆ ಕೆನರಾ ಬ್ಯಾಂಕಿನ ಮ್ಯಾನೇಜರ್ ಬಾಲ ಸಾಹೇಬ್, ಕೋಟೇಶ್ವರದ ಹರೀಶ್, ಕೆವಿಕೆ ವಿಜ್ಞಾನಿ ಜಯಪ್ರಕಾಶ್, ಮೀರಾ ಜಿ., ಆರೋಗ್ಯ ಮಿತ್ರ ಅಧಿಕಾರಿ ಸುಜನ್ ಮಾಲ, ಅಂಚೆ ಮೇಲ್ವಿಚಾರಕ ಮಹೇಂದ್ರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News