×
Ad

ಕೊಲ್ಲೂರು: ಮುದ್ರ ಸಾಲ ಯೋಜನೆ ಹೆಸರಿನಲ್ಲಿ ವಂಚನೆ

Update: 2024-01-03 21:01 IST

ಕೊಲ್ಲೂರು, ಜ.3: ಮುದ್ರ ಸಾಲ ಯೋಜನೆಯಲ್ಲಿ ಸಾಲ ನೀಡುವುದಾಗಿ ನಂಬಿಸಿ ಸಾವಿರಾರು ರೂ. ವಂಚಿಸಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿರಣ ಕುಮಾರ್ ಎಂಬಾತ ಮುದ್ರ ಸಾಲ ಯೋಜನೆಯಲ್ಲಿ ಸಾಲ ಕೊಡಿಸುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜಾಹಿರಾತಿನ ಮುಖಾಂತರ ಪ್ರಕಟಣೆಯನ್ನು ಹಾಕಿದ್ದು ಕೊಲ್ಲೂರಿನ ಸಂತೋಷ(35) ಎಂಬವರು ಈ ಜಾಹಿರಾತನ್ನು ನಂಬಿ ಡಿ.8ರಂದು ದೂರವಾಣಿ ಮೂಲಕ ಕಿರಣ್‌ನನ್ನು ಸಂಪರ್ಕ ಮಾಡಿದ್ದರು.

ಆಗ ಆತ ಮುದ್ರ ಸಾಲ ಕೊಡಿಸುವುದಾಗಿ ತಿಳಿಸಿದ್ದನು. ಅದರಂತೆ ಸಂತೋಷ್ ತನ್ನ ದಾಖಲಾತಿಗಳನ್ನು ಆರೋಪಿಗೆ ವಾಟ್ಸಾಪ್ ಮಾಡಿದ್ದರು. ಅದೇ ರೀತಿ ಮೂರು ಕಂತುಗಳಲ್ಸಲಿ 37,955ರೂ. ಹಣವನ್ನು ಆರೋಪಿಯ ಖಾತೆಗೆ ವರ್ಗಾವಣೆ ಮಾಡಿದ್ದರು. ಆದರೆ ಆರೋಪಿ ದಾಖಲಾತಿಯನ್ನು ಪಡೆದು ಮುದ್ರ ಯೋಜನೆಯ ಸಾಲವನ್ನು ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News