×
Ad

ಕೊರಗ ಸಮುದಾಯದ ಅವಹೇಳನ ಖಂಡಿಸಿ ಪ್ರತಿಭಟನೆ

Update: 2024-01-09 19:35 IST

ಉಡುಪಿ: ವಾರ ಪತ್ರಿಕೆಯೊಂದರ ಲೇಖನದಲ್ಲಿ ಕೊರಗ ಸಮು ದಾಯದ ಕುರಿತು ಜಾತಿ ನಿಂದನೆ ಮತ್ತು ಅವ ಹೇಳನ ಮಾಡಿರುವುದಾಗಿ ಆರೋಪಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ- ಕೇರಳ ನೇತೃತ್ವದಲ್ಲಿ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡಾ ಮಾತನಾಡಿ, ಲೇಖನ ಬರವಣಿಗೆಯು ಕೊರಗದ ಸಮುದಾಯದ ಮಾನವ ಹಕ್ಕು ಗಳ ಘೋರ ಉಲ್ಲಂಘನೆಯಾಗಿದೆ. ಕೊರಗ ಸಮುದಾಯದ ಘನತೆಯನ್ನು ಪ್ರಾಣಿಗಳೊಂದಿಗೆ ಸಮೀಕರಿಸಿ ಬರೆಯಲಾ ಗಿದೆ ಎಂದು ಆರೋಪಿಸಿದರು.

ಆದುದರಿಂದ ಕೊರಗ ಸಮುದಾಯದ ಕುರಿತು ಜಾತಿ ನಿಂದನೆ ಮಾಡಿರುವ ಕೊರಗರನ್ನು ಅವಹೇಳನ ಮಾಡಿರುವ ಕೊರಗರ ಮಾನವ ಘನತೆಗೆ ಕುಂದು ಉಂಟು ಮಾಡಿರುವ ಲೇಖಕರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳ ಬೇಕು ಎಂದು ಅವರು ಒತ್ತಾಯಿಸಿದರು.

ಕೊರಗರ ಭೂಮಿಗಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಈಗಾಗಲೇ ಜಿಲ್ಲೆಯಾದ್ಯಂತ ಒಟ್ಟು 811 ಅರ್ಜಿಗಳನ್ನು ಆಯಾ ತಾಲೂಕಿನ ತಹಶೀಲ್ದಾರ್‌ಗಳ ಮೂಲಕ ಸಲ್ಲಿಸಲಾಗಿದೆ. ಆದರೆ ಕೊರಗ ಸಮು ದಾಯವರಿಗೆ ಹೊಸ ಭೂಮಿ ಕೊಡುವ ಪ್ರಕ್ರಿಯೆಗೆ ಸರಕಾರ ಚಾಲನೆ ನೀಡಿಲ್ಲ. ಕೊರಗರ ಅಭಿವೃದ್ಧಿ ಆಗಬೇಕಾದರೆ ಭೂಮಿ ಅತ್ಯವಶ್ಯಕವಾಗಿದೆ ಎಂದರು.

ಜಿಲ್ಲೆಯಲ್ಲಿ ಕೊರಗ ಸಮುದಾಯದ ಸುಮಾರು 200-300 ಪದವೀಧರರು ಇದ್ದು, ಇವರಿಗೆ ಸರಿಯಾದ ಉದ್ಯೋಗ ಸಿಗು ತ್ತಿಲ್ಲ. ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ರಾಷ್ಟ್ರಪತಿ ಬುಡಕಟ್ಟು ಸಮುದಾಯದ ಪದವೀಧರರಿಗೆ ಉದ್ಯೋಗ ನೀಡುವಂತೆ ಸರಕಾರಕ್ಕೆ ನಿರ್ದೇಶನ ನೀಡಿದರು. ಆದರೆ ಸರಕಾರ ಅದನ್ನು ಈವರೆಗೆ ಪಾಲಿಸಿಲ್ಲ ಎಂದು ಅವರು ದೂರಿದರು.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಒಕ್ಕೂಟದ ಸಂಯೋಜಕ ಪುತ್ರನ್ ಹೆಬ್ರಿ, ಪ್ರಧಾನ ಕಾರ್ಯದರ್ಶಿ ವಿನಯ ಅಡ್ವೆ, ಬೊಗ್ರ ಕೊಕ್ಕರ್ಣೆ, ಉಪಾಧ್ಯಕ್ಷೆ ಗಿರಿಜಾ ಜನ್ನಾಡಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News