×
Ad

ಪುತ್ತಿಗೆ ಪರ್ಯಾಯ ಮಹೋತ್ಸವ: ಹೊರಕಾಣಿಕೆ ಮೆರವಣಿಗೆಗೆ ಚಾಲನೆ

Update: 2024-01-09 19:38 IST

ಉಡುಪಿ, ಜ.9: ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿಯ ಚತುರ್ಥ ಪರ್ಯಾಯೋತ್ಸವದ ಹೊರಕಾಣಿಕೆ ಮೆರವಣಿಗೆಗೆ ಇಂದು ಚಾಲನೆ ನೀಡಲಾಯಿತು.

ಹೊರಕಾಣಿಕೆ ಮೆರವಣಿಗೆಗೆ ಸಂಸ್ಕೃತಿ ಕಾಲೇಜಿನ ಬಳಿ ಮಠದ ದಿವಾನ ನಾಗರಾಜ್ ಆಚಾರ್ಯ, ಪರ್ಯಾಯ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಕೆ.ರಘುಪತಿ ಭಟ್ ಹಾಗೂ ಪುತ್ತಿಗೆ ಮಠದ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಚಾಲನೆ ನೀಡಿದರು.

ಅಲ್ಲಿಂದ ಆರಂಭಗೊಂಡ ಮೆರವಣಿಗೆ ರಥಬೀದಿಯ ಮೂಲಕ ಪುತ್ತಿಗೆ ಮಠಕ್ಕೆ ಸಾಗಿಬಂತು. ತಟ್ಟಿರಾಯ, ನಾಸಿಕ್ ಬ್ಯಾಂಡ್, ವಾದ್ಯ, ಸಿಡಿಮದ್ದು ಆಕರ್ಷಣೀಯವಾಗಿತ್ತು. ನಾಳೆಯಿಂದ ಜೋಡುಕಟ್ಟೆಯಿಂದ ಅದ್ಧೂರಿ ಹೊರಕಾಣಿಕೆ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಹೊರಕಾಣಿಕೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪ್ರಮುಖರಾದ ರಮೇಶ್ ಭಟ್, ರಮೇಶ್ ಶೆಟ್ಟಿ, ಮಂಜುನಾಥ್ ಉಪಾಧ್ಯ, ರವೀಂದ್ರ ಆಚಾರ್ಯ, ವಿಜಯ ರಾಘವ ರಾವ್, ರಾಮಚಂದ್ರ ಉಪಾಧ್ಯಾಯ, ಶ್ರೀನಿವಾಸ ಉಪಾಧ್ಯಾಯ, ರಘುಪತಿ ರಾವ್, ಹಯವದನ ಭಟ್, ಸತೀಶ್ ಕುಮಾರ್, ಗೌತಮ್ ಹೆಗಡೆ, ದೀಪಕ್ ಶೇಟ್, ಕಿರಣ್ ಶೇಟ್, ರುದ್ರಯ್ಯ ಆಚಾರ್ಯ, ನಳಿನ್ ಪ್ರದೀಪ್ ರಾವ್, ಸಂದೀಪ್ ಮಂಜ, ನಾಗರಾಜ ಉಪಾಧ್ಯ, ಶೋಭಾ ಉಪಾಧ್ಯಾಯ, ಜಗದೀಶ್ ಶೇಟ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News