ಸಿಎ ಪರೀಕ್ಷೆಯಲ್ಲಿ ಕೀರ್ತನಾ ಕಾಮತ್ ಉತ್ತೀರ್ಣ
Update: 2024-01-12 18:31 IST
ಉಡುಪಿ, ಜ.12: ಹೊಸದಿಲ್ಲಿಯ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಕಳೆದ ನವೆಂಬರ್ ತಿಂಗಳಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಉಡುಪಿಯ ಕೀರ್ತನಾ ಕಾಮತ್ ತೇರ್ಗಡೆಗೊಂಡಿದ್ದಾರೆ.
ಇವರು ಉಡುಪಿಯ ಕೇಶವ ಕಾಮತ್ ಮತ್ತು ಮುಕ್ತಾ ಕಾಮತ್‌ರ ಪುತ್ರಿ. ಇವರು ತಮ್ಮ ಆರ್ಟಿಕಲ್‌ಶಿಪ್ ತರಬೇತಿಯನ್ನು ಮಂಗಳೂರಿನ ಸಿಎ ಕೃಷ್ಣಕುಮಾರ್ ಮತ್ತು ಶ್ರೀರಾಮುಲು ನಾಯ್ಡು ಕಂಪೆನಿಯಲ್ಲಿ ಪಡೆದಿದ್ದರು.