×
Ad

ಸಿಎ ಪರೀಕ್ಷೆ: ಪ್ರಿಯಾಂಕ ಶ್ರುತಿ ನೊರೋನ್ನಾ ಉತ್ತೀರ್ಣ

Update: 2024-01-13 20:11 IST

ಶಿರ್ವ, ಜ.13: ಕಳೆದ ನವೆಂಬರ್ ತಿಂಗಳಲ್ಲಿ ಅಖಿಲ ಭಾರತ ಲೆಕ್ಕ ಪರಿಶೋಧಕರ ಸಂಸ್ಥೆ ನಡೆಸಿದ ಸಿಎ ಅಂತಿಮ ಪರೀಕ್ಷೆ ಯಲ್ಲಿ ಪ್ರಿಯಾಂಕ ಶ್ರುತಿ ನೊರೋನ್ನಾ ತೇರ್ಗಡೆ ಹೊಂದಿದ್ದಾರೆ.

ಇವರು ಪಾಂಬೂರು ಪ್ರಕಾಶ್ ನೊರೋನ್ನಾ ಹಾಗೂ ಜೆನಿತ್ ಆಲ್ವಾ ದಂಪತಿ ಪುತ್ರಿ. ಉಡುಪಿಯ ಸಿಎ ಕೆ.ಸುರೇಂದ್ರ ನಾಯಕ್ ಇವರಲ್ಲಿ ಆರ್ಟಿಕಲ್‌ಶಿಪ್ ತರಬೇತಿ ಪಡೆದ ಪ್ರಿಯಾಂಕ ಶ್ರುತಿ ನೊರೋನ್ನಾ ಶಿರ್ವದ ಡೋನ್ ಬೊಸ್ಕೊ ಆಂಗ್ಲ ಮಾಧ್ಯಮ ಹಾಗೂ ಉಡುಪಿಯ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿನಿ. ಸಿಎ ಆರಂಭಿಕ ತರಬೇತಿಯನ್ನು ಉಡು ಪಿಯ ತ್ರಿಶಾ ಸಂಸ್ಥೆಯಲ್ಲಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News