×
Ad

ಉಡುಪಿ ಪರ್ಯಾಯಕ್ಕೆ ಜಪಾನಿನ ಗಣ್ಯರ ನಿಯೋಗದ ಆಗಮನ

Update: 2024-01-16 17:19 IST

ಉಡುಪಿ: ಈ ಬಾರಿಯ ವಿಶ್ವ ಗೀತಾ ಪರ್ಯಾಯ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರ ವಿಶೇಷ ಆಹ್ವಾನಿತ ಅತಿಥಿಯಾಗಿ ಜಪಾನ್ ದೇಶದಿಂದ ರೇವ್ ಕೋಶೋ ನಿವಾನೋ ನೇತೃತ್ವದ ಆರು ಮಂದಿಯ ನಿಯೋಗವನ್ನು ಉಡುಪಿಗೆ ಆಗಮಿಸಿದೆ.

ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಮಿಸಿದ ನಿಯೋಗದ ಸದಸ್ಯರಿಗೆ ಹಾರಾರ್ಪಣೆಯ ಮೂಲಕ ಸ್ವಾಗತಿಸ ಲಾಯಿತು. ವಿಶ್ವ ಗೀತಾ ಪರ್ಯಾಯದ ಸ್ವಾಗತ ಸಮಿತಿಯ ಕೋಶಾಧಿಕಾರಿ ರಂಜನ್ ಕಲ್ಕೂರ ಮತ್ತು ಲಕ್ಷ್ಮೀ ರಂಜನ್, ಪುತ್ತಿಗೆ ಶ್ರೀಗಳ ಅಂತಾರಾಷ್ಟ್ರೀಯ ಕಾರ್ಯ ಚಟುವಟಿಕೆಗಳ ಸಂಯೋಜಕ ಡಾ.ಎ.ಕೇಶವ ರಾಜ್ ಮತ್ತು ಪರ್ಯಾಯ ಮಹೋತ್ಸವದ ಕಾರ್ಯಕರ್ತ ಎ.ಮುರಳೀಧರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News