×
Ad

ಮಹಿಳೆಯರ ಸುರಕ್ಷತಾ ಕಾನೂನು ಕುರಿತ ಮಾಹಿತಿ ಕಾರ್ಯಾಗಾರ

Update: 2024-01-16 17:24 IST

ಉಡುಪಿ: ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಮಹಿಳಾ ಸಬಲೀಕರಣ ವಿಭಾಗದ ವತಿಯಿಂದ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾಲೇಜಿನ ಎನ್‌ಎಸ್‌ಎಸ್ ವಿಭಾಗ ಹಾಗೂ ಲೈಂಗಿಕ ದೌರ್ಜನ್ಯ ಪರಿಹಾರ ಸಮಿತಿಯ ಸಹಯೋಗದೊಂದಿಗೆ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಸುರಕ್ಷತೆ ಹಾಗೂ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಶ್ರೀನಿವಾಸ ಉಪಾಧ್ಯ ವಿವಿಧ ಹಂತಗಳಲ್ಲಿ ಮಹಿಳೆಯರ ಸರಕ್ಷತೆಗಾಗಿ ರಚಿಸಿರುವ ಕಾನೂನುಗಳ ಮಾಹಿತಿಯನ್ನು ನೀಡಿದರು. ಉದ್ಯೋಗನಿರತ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಕಾರಣ, ಅದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮ ಗಳು, ಉಚಿತ ಕಾನೂನು ಸೇವೆಗಳ ಸದ್ಬಳಕೆಯ ಕುರಿತು ಬೆಳಕು ಚೆಲ್ಲಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ಮಾತನಾಡಿದರು. ಕಾಲೇಜಿನ ಆಡಳಿತ ವಿಭಾಗ ಮುಖ್ಯಸ್ಥ ಡಾ.ವೀರ ಕುಮಾರ ಕೆ., ಶೈಕ್ಷಣಿಕ ವಿಭಾಗದ ಮುಖ್ಯಸ್ಥೆ ಡಾ.ಶ್ರೀಲತಾ ಕಾಮತ್ ಉಪಸ್ಥಿತರಿದ್ದರು.

ಮಹಿಳಾ ಸಬಲೀಕರಣ ವಿಭಾಗದ ಸದಸ್ಯ ಡಾ.ಲಿಖಿತಾ ಡಿ.ಎನ್. ಹಾಗೂ ಲೈಂಗಿಕ ದೌರ್ಜನ್ಯ ಪರಿಹಾರ ಸಮಿತಿಯ ಸದಸ್ಯ ಡಾ.ತೇಜಸ್ವಿ ನಾಯ್ಕ್ ಸಹಕರಿಸಿದರು. ಮಹಿಳಾ ಸಬಲೀಕರಣ ಸಮಿತಿಯ ಸದಸ್ಯೆ ಶ್ರೀಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News