×
Ad

ಉಡುಪಿ: ನಾಲ್ಕೇ ದಿನದಲ್ಲಿ ಅಪಾಯಕಾರಿ ಹಂಪ್ಸ್ ತೆರವು!

Update: 2024-01-18 21:35 IST

ಉಡುಪಿ, ಜ.18: ನಗರದ ಕೋರ್ಟ್ ರಸ್ತೆಯಲ್ಲಿ ನಾಲ್ಕು ದಿನಗಳ ಹಿಂದೆ ನಿರ್ಮಿಸಲಾದ ಹಂಪ್ಸ್‌ನ್ನು ಸಾಕಷ್ಟು ವಿರೋಧದ ಹಿನ್ನೆಲೆಯಲ್ಲಿ ಜ.17ರಂದು ಬೆಳಗ್ಗೆ ತೆರವುಗೊಳಿಸಲಾಯಿತು.

ವಕೀಲರ ಬೇಡಿಕೆಯಂತೆ ಕೋರ್ಟ್ ಎದುರಿನ ರಸ್ತೆಯಲ್ಲಿ ಬೃಹತ್ ಗಾತ್ರ ಹಂಪ್ಸ್‌ನ್ನು ನಿರ್ಮಿಸಿ ವಾಹನಗಳ ವೇಗಕ್ಕೆ ಮಿತಿ ಹಾಕಲಾಗಿತ್ತು. ಆದರೆ ಈ ಹಂಪ್ಸ್ ಗಮನಿಸದ ಸವಾರರು, ಚಾಲಕರು ವೇಗವಾಗಿ ಬಂದು ಅಪಾಯಕ್ಕೆ ಒಳಗಾಗುತ್ತಿದ್ದರು. ಕೆಲವು ವಾಹನಗಳು ಹಂಪ್ಸ್‌ನಿಂದ ಹಾರಿ ಅಪಘಾತಕ್ಕೆ ಒಳಗಾಗಿದ್ದವು ಎಂದು ತಿಳಿದುಬಂದಿದೆ.

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೆ ಕೆಲವೊಂದು ದೂರುಗಳು ಕೂಡ ಬಂದಿತ್ತು. ಆ ಹಿನ್ನೆಲೆಯಲ್ಲಿ ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ ಅವರ ಸೂಚನೆಯಂತೆ ಹಂಪ್ಸ್‌ನ್ನು ತೆರವು ಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News