×
Ad

ಶಾಸಕ ಯಶ್ಪಾಲ್‌ಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಪರಿಜ್ಞಾನವಿಲ್ಲ: ಜಯನ್ ಮಲ್ಪೆ

Update: 2024-01-20 18:51 IST

ಮಲ್ಪೆ: ಸಂಘ ಪರಿವಾರದ ಕಾನೂನು ಬಾಹಿರ ದಂಧೆಗಳನ್ನು ಬೆಂಬಲಿಸಲು ಅಧಿಕಾರಿಗಳಿಗೆ ಬೆದರಿಸುವ ಶಾಸಕ ಯಶಪಾಲ್ ಸುವರ್ಣ ಅವರಿಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಪರಿಜ್ಞಾನವಿಲ್ಲ ಎಂದು ಜನಪರ ಹೋರಾಟ ಗಾರ ಜಯನ್ ಮಲ್ಪೆ ಆರೋಪಿಸಿದ್ದಾರೆ.

ತೆಂಕನಿಡಿಯೂರು ಗ್ರಾಪಂ ವ್ಯಾಪ್ತಿಯಲ್ಲಿ ಅನಧಿಕೃತ ಕೋಳಿ ಅಂಗಡಿಯನ್ನು ತೆರವುಗೊಳಿಸದ ಪಿಡಿಓ ಅವರನ್ನು ಕೂಡಲೇ ಅಮಾನತು ಮಾಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಶನಿವಾರ ಹಮ್ಮಿಕೊಂಡ ಪ್ರತಿಭಟನಾ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಸದಸ್ಯೆಯೊಬ್ಬಳು ಯಾವುದೇ ಪರವಾನಿಗೆ ಇಲ್ಲದೆ ನಡೆಸುತ್ತಿರುವ ಕೋಳಿ ಅಂಗಡಿಯನ್ನು ಶಾಸಕರು ತೆರವುಗೊಳಿಸುದನ್ನು ಬಿಟ್ಟು ಅಧಿಕಾರಿಗಳಿಗೆ ಬೆದರಿಕೆಯೊಡ್ಡುತ್ತಿರುವುದು ನಾಚಿಕೆಗೇಡು ಎಂದು ಅವರು ದೂರಿದರು.

ಕಾಂಗ್ರೆಸ್ ಉಡುಪಿ ಜಿಲ್ಲಾ ಉಪಾಧ್ಯಾಕ್ಷ ಪ್ರಖ್ಯಾತ್ ಶೆಟ್ಟಿ ಮಾತನಾಡಿ, ಸಂಪೂರ್ಣ ಬೆಂಬಲವಿಲ್ಲದ ತೆಂಕನಿಡಿಯೂರು ಗ್ರಾಪಂ ಜನವಿರೋಧಿ ಕೆಲಸ ಮಾಡುತ್ತಿದ್ದು, ಇದು ಸಂವಿಧಾನಕ್ಕೆ ಬಗೆದ ಅಪಚಾರವಾಗಿದೆ. ನ್ಯಾಯಬದ್ಧ ಬೇಡಿಕೆಗೆ ತಕ್ಷಣ ಸ್ಪಂದಿಸದಿದ್ದಲ್ಲಿ ಮುಂದೆ ತೀವ್ರ ಹೋರಾಟವನ್ನು ಎದುರಿಸ ಬೇಕಾದಿತು ಎಂದು ಎಚ್ಚರಿಕೆ ನೀಡಿದರು.

ದಸಂಸ ಜಿಲ್ಲಾ ಸಂಚಾಲಕ ಶೇಖರ ಹೆಜಮಾಡಿ ಮಾತನಾಡಿ, ಪಂಚಾಯತ್ ರಾಜ್ ಕಾಯ್ದೆಯನ್ನು ಸರಿಯಾಗಿ ಅಥೈಸಿ ಕೊಳ್ಳದ ಅಧಿಕಾರಿ ತನ್ನ ಮಾನ ಕಾಪಾಡಲು ಇನ್ನಾದರೂ ಅನಧಿಕೃತ ಕೋಳಿ ಅಂಗಡಿಯನ್ನು ತೆರವುಗೊಳಿಸದೇ ಹೋದರೆ ಮುಂದೆ ಜಿಲ್ಲೆಗೆ ಬರುವ ಎಲ್ಲಾ ಸಚಿವರಿಗೆ ಕರಿಪತಾಕೆ ಪ್ರದರ್ಶಿಸ ಲಾಗುವುದು ಎಂದು ಎಚ್ಚರಿಸಿದರು.

ಪ್ರಗತಿಪರ ಚಿಂತಕ ಸಂಜೀವ ಬಲ್ಕೂರು ಮಾತನಾಡಿ, ಸಾರ್ವಜನಿಕರ ಆಕ್ಷೇಪವಿರುವ ಮತ್ತು ಪರಿಸರಕ್ಕೆ ಭಾರೀ ಅನಾ ಹುತ ಉಂಟು ಮಾಡುವ ಅನಧಿಕೃತ ಕೋಳಿ ಫಾರ್ಮ್‌ನ್ನು ತಕ್ಷಣ ಮುಚ್ಚಿ ಇಲ್ಲ. ತಮ್ಮ ಕುರ್ಚಿ ಖಾಲಿ ಮಾಡಿ ಜನರಿಗೆ ನೆಮ್ಮದಿಯ ಆಡಳಿತ ನೀಡಲು ಸಹಕರಿಸಬೇಕು ಎಂದರು.

ಕಾಂಗ್ರೆಸ್‌ನ ಹಿರಿಯ ನಾಯಕ ಮಹಾಬಲ ಕುಂದರ್, ದಲಿತ ಮುಖಂಡ ಉಮಾನಾಥ ಪಡುಬಿದ್ರಿ ಮಾತನಾಡಿದರು. ಧರಣಿಯಲ್ಲಿ ಕಾಂಗ್ರೆಸ್‌ನ ಕೀರ್ತಿ ಶೆಟ್ಟಿ ಅಂಬಲಪಾಡಿ, ಹವದ್, ಆನಂದ ಪೂಜಾರಿ, ಉಪೇಂದ್ರ, ಗ್ರಾಪಂ ಸದಸ್ಯರಾದ ರವಿರಾಜ್ ಲಕ್ಷ್ಮೀನಗರ, ವೆಂಕಟೇಶ್ ಕುಲಾಲ್, ಪ್ರಥ್ವಿರಾಜ್ ಶೆಟ್ಟಿ, ಸತೀಶ್ ನಾಯ್ಕ, ಮಂಜುನಾಥ, ಮಾಜಿ ತಾಪಂ ಸದಸ್ಯ ಧನಂಜಯ, ದಲಿತ ಮುಖಂಡರಾದ ಹರೀಶ್ ಸಾಲ್ಯಾನ್, ಗಣೇಶ್ ನೆರ್ಗಿ, ಆನಂದ ಬ್ರಹ್ಮಾವರ, ಸುಕೇಶ್ ಪುತ್ತೂರು, ಸುಶೀಲ್ ಕುಮಾರ್ ಕೊಡವೂರು, ಸಾಧು ಚಿಪ್ಪಾಡಿ, ನವೀನ್ ಬನ್ನಂಜೆ, ಗುಣವಂತ ತೊಟ್ಟಂ, ಅಶೋಕ್ ನಿಟ್ಟೂರು ಮೊದಲಾದವರು ಉಪಸ್ಥಿತರಿದ್ದರು.

ಸ್ಥಳಕ್ಕೆ ಆಗಮಿಸಿದ ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಧಿಕಾರಿ ವಿಜಯ ನಾಯ್ಕ ಮತ್ತು ತಾಹಿಶೀಲ್ದಾ ರರ ಪರವಾಗಿ ಕಂದಾಯ ಆಧಿಕಾರಿ ಗಿರೀಶ್ ಮನವಿ ಸ್ವೀಕರಿಸಿದರು. ಪ್ರಶಾಂತ್ ಬಿ.ಎನ್. ಸ್ವಾಗತಿಸಿದರು. ಕೃಷ್ಣ ಶ್ರೀಯಾನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News