ಖಾತೆಯಿಂದ ಹಣ ವರ್ಗಾಯಿಸಿ ವಂಚನೆ
Update: 2024-01-20 20:19 IST
ಕಾರ್ಕಳ, ಜ.20: ವ್ಯಕ್ತಿಯೊಬ್ಬರ ಖಾತೆಯಿಂದ ಸಾವಿರಾರು ರೂ. ಹಣ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ಮೋಸ ಮಾಡಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಳ್ಳಿ ಗ್ರಾಮದ ಐವನ್ ಜೋಯಲ್ ಸಲ್ದಾನ್ ಎಂಬವರ ಖಾತೆಗೆ ಜ.18ರಂದು ಯುಪಿಐಡಿಯೊಂದರಿಂದ ಖಾತೆಗೆ ಒಂದು ರೂ. ಹಣ ವರ್ಗಾವಣೆ ಮಾಡಿದ್ದು, ಬಳಿಕ ಐವನ್ ಆ ಒಂದು ರೂ. ಹಣ ವಾಪಾಸು ಹಾಕಿದ್ದರು. ತದನಂತರ ಐವನ್ ಖಾತೆಯಿಂದ ಒಟ್ಟು 98,900ರೂ. ಹಣವನ್ನು ವರ್ಗಾವಣೆ ಮಾಡಿ ಮೋಸ ಮಾಡಿರುವುದಾಗಿ ದೂರಲಾಗಿದೆ.