×
Ad

ವರಂಗ ಸೊಸೈಟಿಯಲ್ಲಿ ಕಳವಿಗೆ ಯತ್ನ: ಪ್ರಕರಣ ದಾಖಲು

Update: 2024-01-23 21:37 IST

ಹೆಬ್ರಿ, ಜ.23: ವರಂಗ ಗ್ರಾಮದ ವರಂಗ ಸಹಕಾರಿ ವ್ಯವಸಾಯಿಕ ಸಂಘಕ್ಕೆ ನುಗ್ಗಿ ಕಳವಿಗೆ ಯತ್ನಿಸಿರುವ ಘಟನೆ ಜ.20ರ ಸಂಜೆಯಿಂದ ಜ.22ರ ಬೆಳಗಿನ ಮಧ್ಯಾವಧಿಯಲ್ಲಿ ನಡೆದಿದೆ.

ಸೊಸೈಟಿಯ ಹಿಂಬದಿಯ ಕಿಟಕಿಯ ಸರಳುಗಳನ್ನು ಮುರಿದು ಒಳನುಗ್ಗಿದ ಕಳ್ಳರು, ಒಳಗೆ ಹುಡುಕಾಡಿ ಅಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಅಲ್ಲದೆ ಭದ್ರತಾ ಕೊಠಡಿಯ ಕಬ್ಬಿಣದ ಬಾಗಿಲನ್ನು ಗ್ಯಾಸ್ ಕಟರ್ ಆಯುಧ ವನ್ನು ಉಪಯೋಗಿಸಿ ಕಬ್ಬಿಣದ ಬಾಗಿಲಿಗೆ ಕಿಂಡಿಯನ್ನು ಕೊರೆದು ಒಳಗೆ ಹೋಗಿ ಕಳ್ಳತನಕ್ಕೆ ಯತ್ನಿಸಿರುವುದು ಕಂಡುಬಂದಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News