×
Ad

ವಿದ್ಯುತ್ ಶಾಕ್: ಕಿರಿಯ ಪವರ್‌ಮ್ಯಾನ್ ಮೃತ್ಯು

Update: 2024-01-29 20:29 IST

ಕಾರ್ಕಳ: ವಿದ್ಯುತ್ ಸಂಪರ್ಕ ಮರುಜೋಡಣೆ ಕೆಲಸ ಮಾಡುತ್ತಿದ್ದ ಕಿರಿಯ ಪವರ್‌ಮ್ಯಾನ್ ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಘಟನೆ ಜ.28ರಂದು ಸಂಜೆ 7ಗಂಟೆ ಸುಮಾರಿಗೆ ನೂರಾಲ್ ಬೆಟ್ಟು ಎಂಬಲ್ಲಿ ನಡೆದಿದೆ.

ಮೃತರನ್ನು ಬಾಗಲಕೋಟೆ ಜಿಲ್ಲೆಯ ನೀಲಾನಗರ ಗ್ರಾಮದ ಶ್ರೀನಿವಾಸ(28) ಎಂದು ಗುರುತಿಸಲಾಗಿದೆ. ಇವರು ಒಂದುವರೆ ವರ್ಷದ ಹಿಂದೆ ಮೆಸ್ಕಾಂ ಇಲಾಖೆಯಲ್ಲಿ ಕಿರಿಯ ಪವರ್ ಮ್ಯಾನ್ ಆಗಿ ಕಾರ್ಕಳ ಹೊಸ್ಮಾರ್ ಶಾಖೆಯಲ್ಲಿ ತರಬೇತಿ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದರು. ಇವರು ನೂರಾಲ್ ಬೆಟ್ಟು ವಿದ್ಯುತ್ ಪರಿವರ್ತಕದ ಬಳಿ ವಿದ್ಯುತ್ ಸಂಪರ್ಕ ಮರುಜೋಡಣೆ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದು ಗಂಭಿರ ಗಾಯಗೊಂಡ ಸ್ಥಳದಲ್ಲೇ ಮೃತಪಟ್ಟ ರೆಂದು ತಿಳಿದುಬಂದಿದೆ.

ಮೆಸ್ಕಾಂ ಇಲಾಖೆಯ ಮೇಲಾಧಿಕಾರಿಯವರು ತೀರಾ ನಿರ್ಲಕ್ಷತನದಿಂದ ತರಬೇತಿ ಅವಧಿಯಲ್ಲಿದ್ದ ಶ್ರೀನಿವಾಸ ಒಬ್ಬರನ್ನೇ ಕಳುಹಿಸಿರುವುದೇ ಈ ದುರ್ಘಟನೆಗೆ ಕಾರಣವಾಗಿದೆ ಎಂದು ಮೃತರ ಸಹೋದರ ಪರುಶುರಾಮ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News