ಮನೆಗೆ ನುಗ್ಗಿ ಸೊತ್ತು ಕಳವು
Update: 2024-01-29 20:38 IST
ಕಾಪು, ಜ.29: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಜ.28ರಂದು ಬೆಳಗ್ಗೆ ನಡೆದಿದೆ.
ಕಾಪುವಿನ ಇಬ್ರಾಹಿಂ ಮುಹಮ್ಮದ್ ಎಂಬವರ ಮನೆಯ ಹಿಂಬದಿಯ ಬಾಗಿಲಿನ ಚಿಲಕ ಕಿತ್ತು ಒಳನುಗ್ಗಿದ ಕಳ್ಳರು, ಕಾಪಾಟಿ ನಲ್ಲಿದ್ದ ಚಿನ್ನ ಹಾಗೂ ವಾಚ್‌ನ್ನು ಕಳವು ಮಾಡಿರುವುದಾಗಿ ದೂರಲಾಗಿದೆ. ಇವುಗಳ ಒಟ್ಟು ಮೌಲ್ಯ 97,000ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.