ಕುಂದಾಪುರದಲ್ಲಿ ರಾಷ್ಟ್ರೀಯ ಸ್ವಚ್ಚತಾ ದಿನಾಚರಣೆ: ಫ್ಲೈಓವರ್ ಅಡಿಭಾಗ ಸ್ವಚ್ಛಗೊಳಿಸಿದ ನ್ಯಾಯಾಧೀಶರು, ಅಧಿಕಾರಿಗಳು
ಕುಂದಾಪುರ: ಆರೋಗ್ಯ ಸುಸ್ಥಿತಿಯಲ್ಲಿರಲು ಸ್ವಚ್ಛತೆ ಅನಿವಾರ್ಯ. ಸ್ವಚ್ಚತೆ ನಮ್ಮೆಲ್ಲರ ಜೀವನದ ಧ್ಯೇಯವಾಗಿರಬೇಕು. ಸ್ವಚ್ಚ ಭಾರತ, ಸ್ವಚ್ಚ ಕುಂದಾಪುರದ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು ಸುಂದರ ಕುಂದಾಪುರ ಪಟ್ಟಣ ನಿರ್ಮಾಣಕ್ಕೆ ತಾಜ್ಯ ಮುಕ್ತವಾಗಿಸುವ ಪಣ ತೊಡಬೇಕು ಎಂದು ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶ, ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ರಾಜು ಎನ್. ಹೇಳಿದ್ದಾರೆ.
ಕಾನೂನು ಸೇವಾ ಪ್ರಾಧಿಕಾರ ಕುಂದಾಪುರ, ವಕೀಲರ ಸಂಘ, ಅಭಿಯೋಗ ಇಲಾಖೆ, ತಾಲೂಕು ಆಡಳಿತ, ಕುಂದಾಪುರ ಪುರಸಭೆ, ಕುಂದಾಪುರ ಡಾ.ಬಿ.ಬಿ. ಹೆಗ್ಡೆ ಕಾಲೇಜು ವತಿಯಿಂದ ಕುಂದಾಪುರದಲ್ಲಿ ಮಂಗಳವಾರ ನಡೆದ ’ರಾಷ್ಟ್ರೀಯ ಸ್ವಚ್ಚತಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಕುಂದಾಪುರ ಶಾಸ್ತ್ರೀ ವೃತ್ತದ ಫ್ಲೈಓವರ್ ಅಡಿಭಾಗ ದಲ್ಲಿದ್ದ ತ್ಯಾಜ್ಯ-ಕಸಗಳನ್ನು ನ್ಯಾಯಾಧೀಶರು, ಅಧಿಕಾರಿ-ಸಿಬ್ಬಂದಿಗಳು, ವಿದ್ಯಾರ್ಥಿಗಳು ಸ್ವಚ್ಚಗೊಳಿಸಿದರು.
ಈ ಸಂದರ್ಭದಲ್ಲಿ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಶೃತಿಶ್ರೀ ಎಸ್., ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ರೋಹಿಣಿ ಡಿ., ಸಹಾಯಕ ಸರಕಾರಿ ಅಭಿಯೋಜಕ ಉದಯ ಕುಮಾರ್ ಬಿ.ಎ., ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್, ಉಪತಹಶಿಲ್ದಾರ್ ಪ್ರಕಾಶ್, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಆರ್., ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕ ರಾಘವೇಂದ್ರ ನಾಯ್ಕ್, ಸಮುದಾಯ ಸಂಘಟನಾ ಅಧಿಕಾರಿ ಶರತ್ ಎಸ್.ಖಾರ್ವಿ, ಪ್ರಥಮ ದರ್ಜೆ ಸಹಾಯಕ ಗಣೇಶ್ ಕುಮಾರ್ ಜನ್ನಾಡಿ, ಸದಸ್ಯರಾದ ಪ್ರಭಾಕರ್ ವಿ., ಸಂತೋಷ್ ಶೆಟ್ಟಿ, ಚಂದ್ರಶೇಖರ ಖಾರ್ವಿ, ಪ್ರಭಾವತಿ ಶೆಟ್ಟಿ, ದೇವಕಿ ಸಣ್ಣಯ್ಯ, ಶ್ರೀಧರ ಶೇರಿಗಾರ, ಶೇಖರ್ ಪೂಜಾರಿ, ಕುಂದಾಪುರ ಬಿ.ಬಿ. ಹೆಗ್ಡೆ ಕಾಲೇಜಿನ ಎನ್.ಸಿ.ಸಿ. ವಿದ್ಯಾರ್ಥಿಗಳು ಹಾಜರಿದ್ದರು.