×
Ad

ಸಿಎ ಪರೀಕ್ಷೆ: ಉತ್ತೀರ್ಣರಾದ ಮಹಾಲಕ್ಷ್ಮೀ ಕಿಣಿಗೆ ಸನ್ಮಾನ

Update: 2024-01-31 19:52 IST

ಉಡುಪಿ, ಜ.31: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಹಾಲಕ್ಷ್ಮಿ ಕಿಣಿ ಅವರನ್ನು ಉಡುಪಿಯ ಎಸ್‌ಎಂಎಸ್ಪಿ ಸಂಕೀರ್ಣದಲ್ಲಿರುವ ನಾಯಕ್ ಆ್ಯಂಡ್ ಎಸೋಸಿಯೇಟ್ಸ್‌ನಲ್ಲಿ ಬುಧವಾರ ಸನ್ಮಾನಿಸಲಾಯಿತು.

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಿನ್ಸಿಪಾಲ್ ಡಾ.ಸುಕನ್ಯಾ ಮೇರಿ ಜೆ., ಟಿ.ವನಿತಾ ಕಿಣಿ, ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆ ಉಡುಪಿ ಶಾಖೆ ಮಾಜಿ ಅಧ್ಯಕ್ಷ ನರಸಿಂಹ ನಾಯಕ್ ಉಪಸ್ಥಿತರಿದ್ದರು. ಶ್ರಾವ್ಯಾ ಪೂಜಾರಿ ಸ್ವಾಗತಿಸಿದರು. ಶಮಾ ಕುಂದರ್ ನಿರೂಪಿಸಿದರು. ಸುಪ್ರೀತಾ ವಂದಿಸಿದರು.

ಕಲ್ಸಂಕದ ಟಿ. ವಸಂತ ಕಿಣಿ, ವನಿತಾ ಕಿಣಿ ದಂಪತಿ ಪುತ್ರಿಯಾದ ಮಹಾಲಕ್ಷ್ಮಿ ಕಿಣಿ ಎಂಜಿಎಂನಲ್ಲಿ ದ್ವಿತೀಯ ಪಿಯುಸಿ, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಪದವಿ ಓದಿನ ಜತೆಗೆ ಸಿಎ ವ್ಯಾಸಂಗದಲ್ಲಿ ತೊಡಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News