×
Ad

ಬೈಂದೂರು: ಸೆಂಟ್ರಿಂಗ್ ಸಲಕರಣೆಗಳು ಕಳವು

Update: 2024-01-31 20:27 IST

ಬೈಂದೂರು: ಸೆಂಟ್ರಿಂಗ್ ಕೆಲಸಕ್ಕೆ ಸಂಬಂಧಿಸಿದ ಲಕ್ಷಾಂತರ ರೂ. ಮೌಲ್ಯದ ಸಲಕರಣೆಗಳನ್ನು ಕಳವು ಮಾಡಿರುವ ಘಟನೆ ಜ.17ರಿಂದ ಜ.30 ಮಧ್ಯಾವಧಿಯಲ್ಲಿ ಕಿರಿಮಂಜೇಶ್ವರ ಎಂಬಲ್ಲಿ ನಡೆದಿದೆ.

ಕಿರಿಮಂಜೇಶ್ವರದ ನಾಗರಾಜ ಎಂಬವರು ಮಾಧವ ಎಂಬವರ ಮನೆಯ ಸೆಂಟ್ರಿಂಗ್ ಕೆಲಸ ವಹಿಸಿಕೊಂಡಿದ್ದು ಅದಕ್ಕೆ ಬೇಕಾಗುವ ಸಲಕರಣೆಗಳನ್ನು ಅಲ್ಲೇ ಸಮೀಪದ ಖಾಲಿ ಜಾಗದಲ್ಲಿ ಇಟ್ಟಿದ್ದರು. ಇದರಲ್ಲಿ 92 ಕಬ್ಬಿಣದ ಸೆಂಟ್ರಿಂಗ್ ಶೀಟು ಗಳನ್ನು ಕಳ್ಳರು ಕಳವು ಮಾಡಿಕೊಂಡುಲ ಹೋಗಿರುವುದಾಗಿ ದೂರಲಾಗಿದೆ. ಇವುಗಳ ಒಟ್ಟು ಮೌಲ್ಯ 70ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News