ನಾದ ಮಣಿನಾಲ್ಕೂರರಿಂದ ‘ಕತ್ತಲ ಹಾಡು ಬೆಳಕಿನೆಡೆಗೆ’ ಕಾರ್ಯಕ್ರಮ
ಬ್ರಹ್ಮಾವರ, ಫೆ.3: ತೆಂಕು ಬಿರ್ತಿಯ ಅಂಬೇಡ್ಕರ್ ಯುವಕ ಮಂಡಲ ಮತ್ತು ಅಂಕದಮನೆ ಜಾನಪದ ಕಲಾತಂಡದ ಜಂಟಿ ಆಶ್ರಯದಲ್ಲಿ ಗಾಯಕ ನಾದ ಮಣಿನಾಲ್ಕೂರು ಅವರ ಕತ್ತಲ ಹಾಡು ಬೆಳಕಿನೆಡೆಗೆ ಕಾರ್ಯಕ್ರಮ ಇತ್ತೀಚೆಗೆ ತೆಂಕು ಬಿರ್ತಿಯ ಬಬ್ಬುಸ್ವಾಮಿ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ರಂಗಕರ್ಮಿ ರಾಜು ಮಣಿಪಾಲ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ರಾದ ನಿತ್ಯಾನಂದ ರಾವ್ ಮತ್ತು ಕಲಾವಿದರಾದ ಮನು ಹಂದಾಡಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೇವಲ ಹಣತೆ ದೀಪಗಳು, ಕಾಲು ದೀಪಗಳು ಮತ್ತು ದೀವಟಿಗೆ ಬೆಳಕಿನಲ್ಲಿ ನಾದ ಮಣಿನಾಲ್ಕೂರು ಹಾಡುಗಾರಿಕೆ ನಡೆಸಿಕೊಟ್ಟರು. ಸಮಾಜದ ಅಂಕುಡೊಂಕುಗಳ ಬಗ್ಗೆ ಬೆಳಕು ಚೆಲ್ಲುವ ಹಾಡುಗಳು ಎಲ್ಲರ ಗಮನ ಸೆಳೆಯಿತು. ಈಗೀನ ದೇಶದ ಪರಿಸ್ಥಿತಿ, ಪ್ರಜೆಗಳ ಪರಿಸ್ಥಿತಿ , ಪರಿಸರ, ಪ್ರಕ್ರತಿ, ಮತ್ತು ನಾಗರೀಕರ ಕರ್ತವ್ಯ, ಹೆತ್ತವರ ಕರ್ತವ್ಯಗಳ ಬಗ್ಗೆ ಸಂವಾದ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ವಾರಂಬಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ನಾಗವೇಣಿ ಪಂಡರಿ ನಾಥ್, ಸದಸ್ಯರಾದ ದೇವಾನಂದ ನಾಯಕ್, ಅಂಬೇಡ್ಕರ್ ಯುವಕ ಮಂಡಲದ ಹರೀಶ್ಚಂದ್ರ ಕೆ.ಡಿ., ಪ್ರಶಾಂತ್ ಬಿರ್ತಿ, ಶಿವಾನಂದ ಬಿರ್ತಿ, ಸುಬ್ರಹ್ಮಣ್ಯ ಪ್ರಸಾದ್ ಕೋಟೇಶ್ವರ, ಸುಧಾಕರ ಮಾಸ್ಟರ್ ಗುಜ್ಜರಬೆಟ್ಟು, ಬಿರ್ತಿ ಸುರೇಶ, ವರದರಾಜ್ ಬಿರ್ತಿ, ಅನಿಲ ಬಿರ್ತಿ, ಸಂತೋಷ ಬಿರ್ತಿ, ಚೈತನ್ಯ ಬಿರ್ತಿ, ಸ್ವರಾಜ್ ಬಿರ್ತಿ, ಕಿಶನ್ ಕುಮಾರ್ ಬಿರ್ತಿ, ಸಂದೇಶ ಬ್ರಹ್ಮಾವರ, ರಾಕೇಶ್ ಬಿರ್ತಿ, ಪ್ರಸನ್ನ ಚಾಂತಾರು, ಎಸ್.ನಾರಾಯಣ ಬಿರ್ತಿ ಉಪಸ್ಥಿತರಿದ್ದರು. ಶ್ಯಾಮರಾಜ್ ಬಿರ್ತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.