ದಿವ್ಯಶ್ರೀ ಭಟ್‌ಗೆ ‘ರಾಗ ಧನ ಪಲ್ಲವಿ ಪ್ರಶಸ್ತಿ’ ಪ್ರದಾನ
Update: 2024-02-03 20:42 IST
ಉಡುಪಿ: ಉಡುಪಿ ರಾಗಧನ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸ ಲಾದ ಶ್ರೀಪುರಂದರ ದಾಸ ಮತ್ತು ಸಂಗೀತ ತ್ರಿಮೂರ್ತಿ ಉತ್ಸವದಲ್ಲಿ ದಿವ್ಯಶ್ರೀ ಭಟ್ ಅವರಿಗೆ ರಾಗ ಧನ ಪಲ್ಲವಿ ಪ್ರಶಸ್ತಿ ಯನ್ನು ಶನಿವಾರ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಯಾಗಿ ದಿನೇಶ್ ಕೆ.ಅಮ್ಮಣ್ಣಾಯ ಪ್ರಶಸ್ತಿ ಪ್ರದಾನ ಮಾಡಿದರು. ಪ್ರೊ.ಅರವಿಂದ ಹೆಬ್ಬಾರ್ ಹಾಗೂ ಸರೋಜಾ ಆರ್.ಆಚಾರ್ಯ ಮಾತನಾಡಿದರು. ವೇದಿಕೆಯಲ್ಲಿ ಡಾ.ಕಿರಣ್ ಹೆಬ್ಬಾರ್, ಉಮಾಶಂಕರಿ ಉಪಸ್ಥಿತರಿದ್ದರು.
ಪ್ರೊ.ಕೆ.ಸದಾಶಿವ ರಾವ್ ಸ್ವಾಗತಿಸಿದರು. ಉಪ್ಪಂಗಳ ಶಂಕರಿ ಭಟ್ ಪ್ರಶಸ್ತಿ ಪತ್ರ ವಾಚಿಸಿದರು. ಕೆ.ಆರ್.ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.