ಮೀನುಗಾರ ನಾಪತ್ತೆ
Update: 2024-02-04 21:28 IST
ಕಾಪು: ಮನೆಯಿಂದ ಹೋದ ಮೀನುಗಾರರೊಬ್ಬರು ನಾಪತ್ತೆಯಾಗಿರುವ ಘಟನೆ ಕಟಪಾಡಿ ಮಟ್ಟು ಗ್ರಾಮದ ದುಗ್ಗುಪಾಡಿ ಎಂಬಲ್ಲಿ ಜ.30ರಂದು ನಡೆದಿದೆ.
ನಾಪತ್ತೆಯಾದವರನ್ನು ದುಗ್ಗುಪಾಡಿ ನಿವಾಸಿ ಶ್ರೀನಿವಾಸ ಸಾಲ್ಯಾನ್ (45) ಎಂದು ಗುರುತಿಸಲಾಗಿದೆ. ದೋಣಿಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಇವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಮನೆಯ ನೆರೆಕರೆಯ ವರಲ್ಲಿ ಕಟಪಾಡಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.