ರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆ: ಅಧ್ವಿತ್ ಪ್ರಥಮ
Update: 2024-02-06 18:06 IST
ಕೋಟ: ಐಡಿಯಲ್ ಪ್ಲೇ ಅಭಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕೊಯಮುತ್ತೂರಿನಲ್ಲಿ ನಡೆದ 19ನೇ ರಾಷ್ಟ್ರೀಯ ಮಟ್ಟದ ಅಬಾಕಸ್ ಮತ್ತು 15ನೇ ವೇದಿಕ್ ಮಾಥ್ಸ್ ಸ್ಪರ್ಧೆಯಲ್ಲಿ ಕೋಟ ಎಜುಕೇರ್ ಅಬಾಕಸ್ ಸೆಂಟರ್ ವಿದ್ಯಾರ್ಥಿ ಅಧ್ವಿತ್ ಪಿ.ಹಂದಟ್ಟು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಈ ಸ್ಪರ್ಧಾ ಕೂಟದಲ್ಲಿ ದೇಶದ ವಿವಿಧ ರಾಜ್ಯಗಳಿಂದ 2200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 2023ರ ಅ.29ರಂದು ಹಾಸನದಲ್ಲಿ ನಡೆದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಅಧ್ವಿತ್ ಹಂದಟ್ಟು ತೃತೀಯ ಸ್ಥಾನವನ್ನು ಪಡೆದಿದ್ದರು. ಬ್ರಹ್ಮಾವರದ ಜಿ.ಎ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಒಂದನೇ ತರಗತಿ ವಿದ್ಯಾರ್ಥಿ ಆಗಿರುವ ಅದ್ವಿತ್‌ಗೆ ಕೋಟ ಎಜುಕೇರ್ ಅಬಾಕಸ್ ಸೆಂಟರ್‌ನ ಶಿಕ್ಷಕರಾದ ಪ್ರಸನ್ನ ಕೆ.ಬಿ ಹಾಗೂ ಸುಪ್ರೀತಾ ತರಬೇತಿ ನೀಡಿದ್ದಾರೆ.