ಯೂನೂಸ್ ಖಾಝಿ, ಮುಹಮ್ಮದ್ ಆಸೀಫ್‌ಗೆ ವಿಶ್ವ ಮಾನ್ಯ ಪ್ರಶಸ್ತಿ
Update: 2024-02-07 18:47 IST
ಯುನೂಸ್-ಆಸೀಫ್
ಕುಂದಾಪುರ: ಸೆಂಟ್ ಸಾಂಸ್ಕೃತಿಕ ಸಂಸ್ಥೆ ದುಬೈ ಮತ್ತು ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್(ಇಂಡಿ) ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನೀಡಲಾಗುವ ವಿಶ್ವ ಮಾನ್ಯ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಅನಿವಾಸಿ ಭಾರತೀಯ ರಾದ ಯೂನೂಸ್ ಖಾಝಿ ಭಟ್ಕಳ ಮತ್ತು ಮೊಹಮ್ಮದ್ ಆಸೀಫ್ ಕುಂದಾಪುರ ಅವರನನುಆಯ್ಕೆ ಮಾಡಲಾಗಿದೆ.
ಸಮಾಜ ಸೇವೆ, ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಗಳಿಗೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಯೂನೂಸ್ ಖಾಝಿ ಮತ್ತು ಮೊಹಮ್ಮದ್ ಆಸೀಫ್ ಅವರಿಗೆ ಫೆ.18ರಂದು ದುಬೈನ ಅಲ್ ಕುಸಿಸ್‌ನಲ್ಲಿರುವ ಫಾರ್ಚೂನ್ ಪ್ಲಾಝಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ 17ನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನದಲ್ಲಿ ವಿಶ್ವ ಮಾನ್ಯ ಪ್ರಶಸ್ತಿ 2024 ಪ್ರದಾನ ಮಾಡಲಾಗುವುದು ಎಂದು ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ.ಮಂಜುನಾಥ ಸಾಗರ್ ಪ್ರಕಟಣೆ ತಿಳಿಸಿದೆ.