×
Ad

ಉಡುಪಿ: ಕೇಂದ್ರದ ತಾರತಮ್ಯ ನೀತಿಗಳ ವಿರುದ್ಧ ಸಿಪಿಎಂ ಪ್ರತಿಭಟನೆ

Update: 2024-02-08 22:16 IST

ಉಡುಪಿ, ಫೆ.8: ಭಾರತದ ಒಕ್ಕೂಟವಾದಿ ಸ್ವರೂಪವನ್ನು ಬಲಗೊಳಿಸಲು ಒತ್ತಾಯಿಸಿ ಇಂದು ದೇಶಾದ್ಯಂತ ಸಿಪಿಐ(ಎಂ) ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದು ಉಡುಪಿಯಲ್ಲಿ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ನಡೆಸಲಾಯಿತು.

ಭಾರತದ ಸಂವಿಧಾನದಂತೆ ದೇಶಾದ್ಯಂತ ಒಕ್ಕೂಟವಾದಿ ಸ್ವರೂಪವನ್ನು ಬಲಗೊಳಿಸುವ ಅಗತ್ಯವಿದೆ. ಆದರೆ ಒಕ್ಕೂಟ ಸರಕಾರ ರಾಜ್ಯ ಸರಕಾರಗಳ ಮೇಲೆ ತನ್ನ ಅಧಿಕಾರ ದುರುಪಯೋಗ ಹಾಗೂ ಹಸ್ತಕ್ಷೇಪದ ಮೂಲಕ ಒಕ್ಕೂಟವಾದಿ ಸ್ವರೂ ಪಕ್ಕೆ ಭಂಗ ಉಂಟು ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಪ್ರತಿಭಟನಕಾರರು ಒತಾಯಿಸಿದರು.

ಸಿಪಿಐಎಂ ಪಕ್ಷದ ಹಿರಿಯ ಮುಖಂಡರಾದ ಕೆ.ಶಂಕರ್, ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಚ್.ನರಸಿಂಹ, ವೆಂಕಟೇಶ್ ಕೋಣಿ, ಸುರೇಶ್ ಕಲ್ಲಾಗಾರ, ನಾಗರತ್ನ ಉಡುಪಿ ವಲಯ ಸಿಪಿಎಂ ಪಕ್ಷದ ಕಾರ್ಯದರ್ಶಿ ಶಶಿಧರ ಗೊಲ್ಲ, ಕವಿರಾಜ್ ಎಸ್, ರಾಮ ಕಾರ್ಕಡ, ಎಸ್.ನಳಿನಿ, ವಿಶ್ವನಾಥ ಕೆ, ಸರೋಜ, ಜಿಲ್ಲಾ ಸಮಿತಿ ಸದಸ್ಯರಾದ ರಾಜು ಪಡುಕೊಣೆ, ಚಂದ್ರಶೇಖರ್,ಸಿಐಟಿಯು ಮುಖಂಡರಾದ ಮೋಹನ್, ರಮೇಶ್ ಶೇರಿಗಾರ್, ಮುರಳಿ, ಸುಭಾಶ್ ನಾಯಕ್, ಸದಾಶಿವ ಪೂಜಾರಿ, ಸೈಯದ್, ಬುದ್ಯ, ಸಂತೋಷ್, ರಂಗನಾಥ ಉಪಸ್ಥಿತರಿದ್ದರು.




Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News