ರಾಜ್ಯಮಟ್ಟದ ಕರಾಟೆ: ಶಿರ್ವ ಫೈಝಲ್ ಇಸ್ಲಾಂ ವಿದ್ಯಾರ್ಥಿಗಳ ಸಾಧನೆ
Update: 2024-02-09 18:49 IST
ಶಿರ್ವ: ಮಂಗಳೂರಿನ ಸೈಂಟ್ ರೀಟಾ ಪ್ರಾಥಮಿಕ ಶಾಲೆ ಕ್ಯಾಸ್ಟಿಯಾ ದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ಆಫ್ ಮಾರ್ಷಲ್ ಆರ್ಟ್ಸ್ ಚಾಂಪಿಯನ್‌ಶಿಪ್‌ನಲ್ಲಿ ಶಿರ್ವ ಫೈಝಲ್ ಇಸ್ಲಾಂ ಶಾಲೆಯ ವಿದ್ಯಾರ್ಥಿಗಳು ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಮುಹಮ್ಮದ್ ಅಫಾಕ್ ಅಬ್ಬಾಸ್ ಮತ್ತು ಮುಹಮ್ಮದ್ ರುಮಾನ್ ತಲಾ ಒಂದು ಚಿನ್ನ ಹಾಗೂ ಒಂದು ಬೆಳ್ಳಿ, ಮುಹಮ್ಮದ್ ಅಯಾನ್ ಎರಡು ಬೆಳ್ಳಿ, ಮುಹಮ್ಮದ್ ಸಾದ್ ಮತ್ತು ಮುಝೈನ್ ಎ.ಖಾದರ್, ಶೇಖ್ ಮೊಹಮ್ಮದ್ ಝಿಶಾನ್ ಅವರು ತಲಾ ಒಂದು ಬೆಳ್ಳಿ ಪದಕವನ್ನು ಗಳಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಜಪಾನ್ ಶೋಡೊಕಾನ್ ಕರಾಟೆ ಕನ್ನಿಂಜುಕು ಆರ್ಗ ನೈಝೇಶನ್ ಇಂಡಿಯಾ ಇದರ ಕರ್ನಾಟಕ ರಾಜ್ಯದ ಮುಖ್ಯ ಶಿಕ್ಷಕ ಮತ್ತು ಪರೀಕ್ಷಕ ಶಂಶುದ್ದೀನ್ ಎಚ್.ಶೇಖ್ ತರಬೇತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಶಾಲಾ ಆಡಳಿತಾಧಿಕಾರಿ ಜಿ.ಮುಹಮ್ಮದ್ ಇಕ್ಬಾಲ್, ಮುಖ್ಯೋಪಾಧ್ಯಾಯಿನಿ ಖೈರುನ್ನೀಸಾ, ಸಂಯೋಜಕಿ ಅಫ್ಸಾ ಬೀಬಿ ಉಪಸ್ಥಿತರಿದ್ದರು.