×
Ad

ಯುವಕ ನಾಪತ್ತೆ

Update: 2024-02-10 21:01 IST

ಮಣಿಪಾಲ, ಫೆ.10: ಇಲ್ಲಿನ ಸುಕುಮಾರ್ ಯುವರಾಜ್ ಎಂಬವರ ಮಗ ಸುದರ್ಶನ್(38) ಎಂಬವರು ಫೆ.8ರಂದು ಬೆಳಗ್ಗೆ ಮನೆಯಿಂದ ಯಾರಿಗೂ ಹೇಳದೆ ಹೊರಗೆ ಹೋದವರು ವಾಪಾಸ್ ಬಾರದೇ ನಾಪತ್ತೆಯಾಗಿದ್ದಾರೆ.

5 ಅಡಿ ಎತ್ತರ, ಗೋಧಿ ಮೈ ಬಣ್ಣ, ಕಪ್ಪು ಕೂದಲು ಹೊಂದಿರುವ ಇವರು, ನೇರಳೆ ಬಣ್ಣದ ತುಂಬು ತೋಳಿನ ಅಂಗಿ ಮತ್ತು ಕಪ್ಪುಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ, ತುಳು, ಇಂಗ್ಲೀಷ್, ಹಿಂದಿ, ಮರಾಠಿ ಭಾಷೆ ಮಾತನಾಡು ತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News